ಅಶ್ಲೀಲವಾಗಿ ಫೋನ್ ನಲ್ಲಿ ಬೈದ ಸಿದ್ದರಾಮಯ್ಯ ಹಳೇ ವಿಡಿಯೋ ವೈರಲ್

Krishnaveni K

ಶುಕ್ರವಾರ, 20 ಡಿಸೆಂಬರ್ 2024 (11:06 IST)
ಬೆಂಗಳೂರು: ಶಾಸಕ ಸಿಟಿ ರವಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಅಶ್ಲೀಲ ಪದ ಪ್ರಯೋಗಿಸಿದ್ದಾರೆ ಎಂಬ ಆರೋಪದ ಬೆನ್ನಲ್ಲೇ ಈಗ ಸಿಎಂ ಸಿದ್ದರಾಮಯ್ಯ ಅಶ್ಲೀಲ ಪದ ಬಳಸಿ ಫೋನ್ ನಲ್ಲಿ ಬೈದ ವಿಡಿಯೋವೊಂದನ್ನು ನೆಟ್ಟಿಗರೊಬ್ಬರು ವೈರಲ್ ಮಾಡಿದ್ದಾರೆ.

ನಿನ್ನೆ ಸದನದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮನ್ನು ಕೊಲೆಗಾರ ಎಂದಿದ್ದಕ್ಕೆ ಸಿಟಿ ರವಿ ಅವರನ್ನು ಮಹಿಳೆಗೆ ಅಪಮಾನ ಮಾಡುವ ಪದ ಬಳಸಿ ನಿಂದಿಸಿದ್ದಾರೆ ಎಂಬುದು ಆರೋಪವಾಗಿದೆ. ಈ ಸಂಬಂಧ ಸಿಟಿ ರವಿಯನ್ನು ಬಂಧಿಸಲಾಗಿದೆ.

ಪ್ರಕರಣ ಸಂಬಂಧ ಬಿಜೆಪಿ ಭಾರೀ ಆಕ್ರೋಶ ವ್ಯಕ್ತಪಡಿಸುತ್ತಿದೆ. ಇಂದು ಚಿಕ್ಕಮಗಳೂರು ಬಂದ್ ಗೂ ಕರೆ ನೀಡಿದೆ. ಬೆಳಗಾವಿ ಲಕ್ಷ್ಮೀ ಹೆಬ್ಬಾಳ್ಕರ್ ಸ್ವ ಕ್ಷೇತ್ರವಾಗಿದ್ದು ಈ ಕಾರಣಕ್ಕೆ ಅವರ ಬೆಂಬಲಿಗರೂ ದಾಳಿ ಮಾಡಿದ್ದಾರೆ.

ಇದೊಂದು ಕಡೆಯಾದರೆ ಇತ್ತ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರೊಬ್ಬರು ಸಿಎಂ ಸಿದ್ದರಾಮಯ್ಯ ಫೋನ್ ನಲ್ಲಿ ‘ಸೂಳೆ ಮಗನೇ’ ಎಂದು ಅಶ್ಲೀಲವಾಗಿ ಮಾತನಾಡಿರುವ ಹಳೆಯ ವಿಡಿಯೋವನ್ನು ಹರಿಯಿಬಿಟ್ಟಿದ್ದು, ಸಿಟಿ ರವಿಗೆ ಅನ್ವಯವಾಗುವ ಕಾನೂನು ಸಿದ್ದರಾಮಯ್ಯನವರಿಗೂ ಅನ್ವಯಾಗುವುದೇ ಎಂದು ಪ್ರಶ್ನೆ ಮಾಡಿದ್ದಾರೆ. ಆ ವಿಡಿಯೋ ಇಲ್ಲಿದೆ ನೋಡಿ.

ಹಾಗಿದ್ರೆ... ಅವಾಚ್ಯ ಶಬ್ದ ಬಳಸಿದ್ದ ಸಿದ್ದರಾಮಯ್ಯನನ್ನು ಅರೆಸ್ಟ್ ಮಾಡಿ.#Siddaramaiah #ctravi #belagavi #LakshmiHebbalkar #bjpkarnataka #jds #karnataka #KumaraSwamyForCM pic.twitter.com/LAzzUN5E4X

— Kumaraswamy for CM (@Kumaraswamy4cm) December 19, 2024

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ