ಧರ್ಮಸ್ಥಳದಲ್ಲಿ ಎಷ್ಟು ಸ್ಥಳದಲ್ಲಿ ಅಸ್ಥಿಪಂಜರ ಸಿಕ್ಕಿತ್ತು: ಸಿಎಂ ಹೇಳಿದ ಶಾಕಿಂಗ್ ಸತ್ಯ
ಧರ್ಮಸ್ಥಳದಲ್ಲಿ ಅನಾಮಿಕ ದೂರುದಾರ ಮೊದಲು 13 ಸ್ಥಳಗಳನ್ನು ಗುರುತಿಸಿದ್ದ. ಬಳಿಕ ಎಸ್ಐಟಿ ತಂಡ ಆತನ ನಿರ್ದೇಶನದಂತೆ 15 ಕಡೆ ಶೋಧ ನಡೆಸಿತ್ತು. ಈ ಪೈಕಿ ಆರನೇ ಪಾಯಿಂಟ್ ನಲ್ಲಿ ಅಸ್ಥಿಪಂಜರ ಸಿಕ್ಕಿದ್ದು ಬಹಿರಂಗವಾಗಿತ್ತು. ಆದರೆ ಇಂದು ಸಿಎಂ ಸಿದ್ದರಾಮಯ್ಯ ಶಾಕಿಂಗ್ ಸತ್ಯ ರಿವೀಲ್ ಮಾಡಿದ್ದಾರೆ.
ಇಂದು ಧರ್ಮಸ್ಥಳ ಕೇಸ್ ಬಗ್ಗೆ ಮೊದಲ ಬಾರಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಪ್ರಕರಣದ ಬಗ್ಗೆ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದೂ ಟಾಂಗ್ ಕೊಟ್ಟರು. ಧರ್ಮಸ್ಥಳದಲ್ಲಿ ಒಟ್ಟು 15 ಕಡೆ ಶೋಧ ನಡೆಸಿ ಎರಡು ಕಡೆ ಅಸ್ಥಿಪಂಜರ ಸಿಕ್ಕಿದೆ ಎಂಬ ವಿಚಾರವನ್ನು ಸಿಎಂ ರಿವೀಲ್ ಮಾಡಿದ್ದಾರೆ. ಸ್ವತಃ ಗೃಹಸಚಿವ ಪರಮೇಶ್ವರ್ ಕೂಡಾ ಇದುವರೆಗೆ ಎಷ್ಟು ಕಡೆ ಅಸ್ಥಿಪಂಜರ ಸಿಕ್ಕಿತ್ತು ಎಂದು ಹೇಳಿರಲಿಲ್ಲ. ಆದರೆ ತನಿಖೆಯ ಸಾರಾಂಶದ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.