ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತುಹಾಕಿದ್ದೇನೆ ಎಂದು ದೂರು ನೀಡಿದ್ದ ಮಾಸ್ಕ್ ಮ್ಯಾನ್ ರಹಸ್ಯಗಳನ್ನು ಬೇಧಿಸಲು ಈಗ ಖಡಕ್ ಆಫೀಸರ್ ರಂಗಕ್ಕಿಳಿದಿದ್ದಾರೆ.
ಧರ್ಮಸ್ಥಳದಲ್ಲಿ ಶವಗಳಿಗಾಗಿ ನಡೆದ ಶೋಧದಲ್ಲಿ ಆರನೇ ಪಾಯಿಂಟ್ ಬಿಟ್ಟರೆ ಉಳಿದ ಕಡೆ ಏನೂ ಸಿಕ್ಕಿರಲಿಲ್ಲ. ಆರನೇ ಪಾಯಿಂಟ್ ನಲ್ಲೂ ತುಂಬಾ ಹಳೆಯ ಪುರುಷನ ದೇಹದ ಅಸ್ಥಿಪಂಜರ ಸಿಕ್ಕಿತ್ತಷ್ಟೇ. ಆದರೆ ಮಾಸ್ಕ್ ಮ್ಯಾನ್ ಹೇಳಿದಂತೆ ಯಾವುದೇ ಶವ ಸಿಕ್ಕಿರಲಿಲ್ಲ.
ಇದೀಗ ಮಾಸ್ಕ್ ಮ್ಯಾನ್ ಬಗ್ಗೆಯೇ ಅನುಮಾನ ಶುರುವಾಗಿದ್ದು ಆತನನ್ನು ವಿಚಾರಣೆಗೊಳಪಡಿಸಲು ಎಸ್ಐಟಿ ತೀರ್ಮಾನಿಸಿದೆ. ಇದಕ್ಕಾಗಿ ಸ್ವತಃ ಎಸ್ಐಟಿ ಮುಖ್ಯಸ್ಥ ಖಡಕ್ ಆಫೀಸರ್ ಪ್ರಣಬ್ ಮೊಹಂತಿ ರಂಗಕ್ಕಿಳಿದಿದ್ದಾರೆ.
ತಾವೇ ಮಾಸ್ಕ್ ಮ್ಯಾನ್ ವಿಚಾರಣೆ ನಡೆಸಲು ಪ್ರಣಬ್ ಮೊಹಂತಿ ಮಂಗಳೂರಿಗೆ ಬರುತ್ತಿದ್ದಾರೆ. ತನಗೆ ಯಾರೋ ಹೇಳಿದ್ದಕ್ಕೆ ಶವಗಳನ್ನು ಅಕ್ರಮವಾಗಿ ಹೂತು ಹಾಕಿದ್ದೆ ಎಂದು ದೂರು ನೀಡಿದ್ದಾಗಿ ಈ ಮೊದಲು ಆತ ಎಸ್ಐಟಿ ಮುಂದೆ ತಪ್ಪೊಪ್ಪಿಕೊಂಡಿದ್ದ ಎಂಬ ಸುದ್ದಿ ಬಂದಿತ್ತು. ಇದೀಗ ಆ ನಿಟ್ಟಿನಲ್ಲಿ ಮಾಸ್ಕ್ ಮ್ಯಾನ್ ನ ವಿಚಾರಣೆ ನಡೆಸಲು ಪ್ರಣಬ್ ಮೊಹಂತಿ ಮುಂದಾಗಿದ್ದಾರೆ.