ಹಾಲಿನ ದರ ಏರಿಕೆ ಮಾಡಿ ಮತ್ತಷ್ಟು ಲೂಟಿ ಹೊಡೆಯುವ ಪ್ಲ್ಯಾನ್ ಸಿಎಂ ಸಿದ್ದರಾಮಯ್ಯರದ್ದು: ಆರ್‌ ಅಶೋಕ್ ಆಕ್ರೋಶ

Sampriya

ಶುಕ್ರವಾರ, 13 ಸೆಪ್ಟಂಬರ್ 2024 (19:19 IST)
ಬೆಂಗಳೂರು: ಇನ್ನು ಇರುವಷ್ಟು ದಿನ ಇನ್ನಷ್ಟು ಲೂಟಿ ಹೊಡೆದು ಹೋಗೋಣ ಎಂದು ಸಿಎಂ ಸಿದ್ದರಾಮಯ್ಯ ಅವರು ನಿರ್ಧಾರ ಮಾಡಿದಂತೆ ಕಾಣುತ್ತಿದೆ ಎಂದು ವಿಪಕ್ಷ ನಾಯಕ ಆರ್‌ ಅಶೋಕ್ ಆಕ್ರೋಶ ಹೊರಹಾಕಿದರು.

ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಬಹಿರಂಗವಾಗಿ ಘೋಷಣೆ ಮಾಡಿದರು.

ಈ ಬಗ್ಗೆ ಸಾಮಾಜಿಕ ಜಾಲತಾಣ ವಿಪಕ್ಷ ನಾಯಕ ಆರ್‌ ಅಶೋಕ್ ಪೋಸ್ಟ್ ಹಂಚಿಕೊಂಡಿದ್ದಾರೆ.

 ಉಂಡೂ ಹೋದ ಕೊಂಡೂ ಹೋದ ಎನ್ನುವ ಗಾದೆ ಮಾತಿನಂತೆ ಹೇಗಿದ್ದರೂ ಭ್ರಷ್ಟಾಚಾರ ಮಾಡಿ ಸಿಕ್ಕಿಹಾಕಿಕೊಂಡು ರಾಜೀನಾಮೆ ಕೊಡುವ ಪರಿಸ್ಥಿತಿಗೆ ತಲುಪಿದ್ದೇನೆ, ಇನ್ನು ಇರುವಷ್ಟು ದಿನ ಇನ್ನಷ್ಟು ಲೂಟಿ ಹೊಡೆದು ಹೋಗೋಣ ಎಂದು ಸಿಎಂ ಸಿದ್ದರಾಮಯ್ಯ ಅವರು ನಿರ್ಧಾರ ಮಾಡಿದಂತೆ ಕಾಣುತ್ತಿದೆ.

ಅಧಿಕಾರಕ್ಕೆ ಬಂದಾಗಿನಿಂದ ಕಳೆದ 15 ತಿಂಗಳಲ್ಲಿ ಎರಡು ಬಾರಿ ಒಟ್ಟು 5 ರೂಪಾಯಿ ಹಾಲಿನ ದರ ಏರಿಕೆ ಮಾಡಿರುವ ಕಾಂಗ್ರೆಸ್ ಸರ್ಕಾರ ಈಗ ಮತ್ತೊಮ್ಮೆ ಹಾಲಿನ ದರ ಏರಿಸಲು ಹೊರಟಿದೆ.

ಇತ್ತ ಗ್ರಾಹಕರಿಗೆ ಹಾಲಿನ ಬೆಲೆ ಏರಿಕೆ, ಅತ್ತ ರೈತರಿಗೆ ಹಾಲಿನ ಖರೀದಿ ದರ ಕಡಿತ, ಒಟ್ಟಿನಲ್ಲಿ ಈ ಲೂಟಿಕೋರ ಕಾಂಗ್ರೆಸ್ ಸರ್ಕಾರ ಇರುವವರೆಗೂ ಕನ್ನಡಿಗರಿಗೆ ಉಳಿಗಾಲವಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ