ಮೋದಿ ಸರ್ಕಾರ ಹೇಳಿದ್ದನ್ನು ವಿರೋಧಿಸೋಣ ಎಂದು ದಕ್ಷಿಣ ಭಾರತದ ಸಿಎಂಗಳಿಗೆ ಕರೆ ಕೊಟ್ಟ ಸಿಎಂ ಸಿದ್ದರಾಮಯ್ಯ
ಶನಿವಾರ, 24 ಮಾರ್ಚ್ 2018 (09:21 IST)
ಬೆಂಗಳೂರು: ಕೇಂದ್ರ ಸರ್ಕಾರದ ಆರ್ಥಿಕ ನೀತಿ ವಿರುದ್ಧ ದಕ್ಷಿಣ ಭಾರತದ ಎಲ್ಲಾ ಮುಖ್ಯಮಂತ್ರಿಗಳನ್ನು ತಿರುಗಿ ಬೀಳುವಂತೆ ಸಿಎಂ ಸಿದ್ದರಾಮಯ್ಯ ಕರೆಕೊಟ್ಟಿದ್ದಾರೆ.
ಈಗಾಗಲೇ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಕೇಂದ್ರದ ಜತೆ ಮೈತ್ರಿ ಮುರಿದುಕೊಂಡಿದ್ದಾರೆ. ಕಾವೇರಿ ವಿವಾದದ ತೀರ್ಪಿನ ನಂತರ ತಮಿಳುನಾಡು ಸರ್ಕಾರವೂ ಕೇಂದ್ರದ ಮೇಲೆ ಅಸಮಾಧಾನಗೊಂಡಿದೆ. ಕೇರಳದಲ್ಲಿ ಸಿಪಿಎಂ ಸರ್ಕಾರ ಮೊದಲಿನಿಂದಲೂ ಬಿಜೆಪಿ ವಿರೋಧಿ. ಈ ಹಿನ್ನಲೆಯಲ್ಲಿ ಕರ್ನಾಟಕ ಸಿಎಂ ಸಿದ್ದರಾಮಯ್ಯ ದಕ್ಷಿಣ ಭಾರತದ ಸಿಎಂಗಳಿಗೆ ಒಗ್ಗಟ್ಟಾಗಿ ಕೇಂದ್ರದ ನೀತಿ ಆರ್ಥಿಕ ನೀತಿ ವಿರುದ್ಧ ಹೋರಾಡಲು ಕರೆ ನೀಡಿದ್ದಾರೆ.
ಇದುವರೆಗೆ ತೆರಿಗೆ ವಿತರಣೆ ನಿರ್ಧರಿಸಲು ಇದುವರೆಗೆ 1971 ರ ಜನಗಣತಿ ಪರಿಗಣಿಸಲಾಗುತ್ತಿತ್ತು. ಆದರೆ ಇದೀಗ ಕೇಂದ್ರ ಸರ್ಕಾರ 2011 ರ ಜನಗಣತಿ ಆಧಾರವಾಗಿ ಪರಿಗಣಿಸುವಂತೆ ಸೂಚಿಸಿದೆ. ಇದರಿಂದ ದಕ್ಷಿಣದ ರಾಜ್ಯಗಳಿಗೆ ತೊಂದರೆಯಾಗುತ್ತದೆ ಎನ್ನುವುದು ಸಿಎಂ ಸಿದ್ದರಾಮಯ್ಯ ವಾದ. ಹೀಗಾಗಿ ಕೇಂದ್ರದ ಈ ನಿರ್ಧಾರದ ವಿರುದ್ಧ ನಿಲ್ಲುವಂತೆ ಸಿಎಂ ಸಿದ್ದರಾಮಯ್ಯ ಟ್ವಿಟರ್ ನಲ್ಲಿ ಕರೆಕೊಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ