ಬಳ್ಳಾರಿಯ ಮೋತಿ ವೃತ್ತದ ಬಳಿ ಧ್ವಜಾರೋಹಣ ಮಾಡಿ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಕಲ್ಯಾಣಮಠ ಶ್ರೀ, ನಂದಿಪುರ ಸ್ವಾಮೀಜಿ, ಹೂವಿನಹಡಗಲಿ ಗವಿಮಠದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಪಾದಯಾತ್ರೆಯುದ್ದಕ್ಕೂ ಮತದಾನ ಜಾಗೃತಿ, ಜಾಗೃತಿ ಶಿಬಿರ, ಭ್ರಷ್ಟಾಚಾರ ಮುಕ್ತ ಸಮಾಜಕ್ಕಾಗಿ ಹೋರಾಟದಂತಹ ವಿಷಯಗಳ ಮೇಲೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಲಾಗುತ್ತದೆ. ನಿವೃತ್ತ ಐಪಿಎಸ್ ಅಧಿಕಾರಿಯ ಅಕ್ರಮ ಆಸ್ತಿ ಸೇರಿದಂತೆ ಹಲವು ದಾಖಲು ಬಿಡುಗಡೆ ಮಾಡುವುದಾಗಿ ಅಣ್ಣಾ ಹಜಾರೆ ಫೌಂಡೇಶನ್ ಸಂಸ್ಥಾಪಕ ರಾಜಶೇಖರ್ ಮುಲಾಲಿ ಹೇಳಿಕೆ ನೀಡಿದ್ದಾರೆ.