ವಿಧಾನಸೌಧದಲ್ಲಿ ಈಶ್ವರಪ್ಪ-ಸಿಎಂ ಸಿದ್ದು ನಡುವೆ ವಾಕ್ಸಮರ

ಗುರುವಾರ, 8 ಜೂನ್ 2017 (11:59 IST)
ಬೆಂಗಳೂರು: ರೈತರ ಸಾಲಮನ್ನಾ ವಿಚಾರವಾಗಿ ವಿಪಕ್ಷ ನಾಯಕ ಈಶ್ವರಪ್ಪ ಮತ್ತು ಸಿಎಂ ಸಿದ್ಧರಾಮಯ್ಯ ನಡುವೆ ಸದನದಲ್ಲಿ ಜೋರಾದ ಮಾತಿನ ಚಕಮಕಿಗೆ ಕಾರಣವಾಯ್ತು.

 
ಬರ ಕುರಿತ ಚರ್ಚೆಯ ಸಂದರ್ಭದಲ್ಲಿ ಸಾಲ ಮನ್ನಾ ವಿಷಯ ಪ್ರಸ್ತಾಪಿಸಿದ ಈಶ್ವರಪ್ಪ ರಾಜ್ಯದಲ್ಲಿ ಸಾಲಮನ್ನಾ ಮಾಡದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಮಧ್ಯಪ್ರದೇಶ, ಉತ್ತರಪ್ರದೇಶದಲ್ಲಿ ಸಾಲ ಮನ್ನಾ ಮಾಡಲಾಗಿದೆ. ನಮ್ಮ ರಾಜ್ಯದಲ್ಲಿ ಮಾತ್ರ ಸಾಲ ಮನ್ನಾ ಮಾಡಲು ಹಿಂದೇಟು ಹಾಕುತ್ತಿರುವುದೇಕೆ ಎಂದು ಪ್ರಶ್ನಿಸಿದರು.

ತಕ್ಷಣ ಎದ್ದು ನಿಂತ ಸಿದ್ದರಾಮಯ್ಯ ಈಶ್ವರಪ್ಪಗೆ ಟಾಂಗ್ ನೀಡಿದ್ದಾರೆ. ಮೊದಲು ಕೇಂದ್ರ ಸರ್ಕಾರ ಸಾಲ ಮನ್ನಾ ಮಾಡಲಿ, ನಂತರ ನಾವೂ ಮಾಡುತ್ತೇವೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ ಜಗದೀಶ್ ಶೆಟ್ಟರ್ ಸಿಎಂ ಆಗಿದ್ದಾಗ ಮಾಡಿದ್ದರು. ಎಲ್ಲವನ್ನೂ ಕೇಂದ್ರದತ್ತಲೇ ಬೊಟ್ಟು ಮಾಡುವುದೇಕೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಜಗದೀಶ್ ಶೆಟ್ಟರ್ ಮಾಡಿದ್ದ 3.5 ಸಾವಿರ ಕೋಟಿ ರೂ. ಸಾಲ ಬೊಕ್ಕಸಕ್ಕೆ ಹೊರೆಯಾಗಿದೆ. ಅದನ್ನು ಯಾರು ತೀರಿಸುತ್ತಾರೆ ಎಂದು ಪ್ರಶ್ನಿಸಿದರು. ಇದಕ್ಕೆ ಮಧ್ಯೆ ಉತ್ತರಿಸಿದ ಈಶ್ವರಪ್ಪ ನಾವು ಮುಂದಿನ ಬಾರಿ ಅಧಿಕಾರಕ್ಕೆ ಬರುವಾಗ ತೀರಿಸುತ್ತೇವೆ ಎಂದರು.

ಮುಂದಿನ ಬಾರಿಯೂ ನಾವೇ ಅಧಿಕಾರಕ್ಕೆ ಬರುವುದು. ನೀವು ಅಧಿಕಾರಕ್ಕೆ ಬರುತ್ತೀರೆಂಬುದು ನಿಮಗೆ ಭ್ರಮೆ. ಉಪಚುನಾವಣೆಯೇ ಇದಕ್ಕೆ ದಿಕ್ಸೂಚಿ ಎಂದರು. ಈ ಮಧ್ಯೆ ಸಭಾಪತಿ ಶಂಕರಮೂರ್ತಿ ಮಧ್ಯಪ್ರವೇಶಿಸಿದರೂ, ಇವರಿಬ್ಬರ ನಡುವೆ ವಾಗ್ವಾದ ಮುಂದುವರಿದೇ ಇತ್ತು.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ