ಖಾಸಗಿ ಕ್ಷೇತ್ರದಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶಕ್ಕೆ ಕಾನೂನು

ಗುರುವಾರ, 2 ಫೆಬ್ರವರಿ 2017 (12:19 IST)
ಡಾ ಸರೋಜಿನಿ ಮಹಿಷಿ ವರದಿಯ ಪುನರ್ ಪರಿಶೀಲನಾ ಸಮಿತಿ ಎರಡು ಭಾಗಗಳಲ್ಲಿ ವರದಿಯನ್ನು ಸಲ್ಲಿಸಿದೆ, ಈ ಬಗ್ಗೆ ಸಂಪುಟ ಸಭೆ ಹಾಗೂ ಕಾನೂನು ತಜ್ಞರ ಜೊತೆ ಚರ್ಚಿಸಿ ಸೂಕ್ತ ಕಾನೂನು ತರಲು ನಿರ್ಧರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
 
ನಮ್ಮ ಮೀಸಲಾತಿ ಮಹತ್ವ ಕಳೆದು ಕೊಳ್ಳುತ್ತಿದೆ, ಇದಕ್ಕೆ ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ ಹೆಚ್ಚುತ್ತಿರುವುದು ಕಾರಣವಾಗಿದೆ. ಕೈಗಾರಿಕೆಗಳ ಬೆಳವಣಿಗೆಯ ಜೊತೆಗೆ ಖಾಸಗಿ ಕ್ಷೇತ್ರದ ಉದ್ಯೋಗ ಸೃಷ್ಟಿಯಲ್ಲಿ ಕನ್ನಡಿಗರಿಗೆ ಆದ್ಯತೆ ಸಿಗಬೇಕು. 
 
ಕೇಂದ್ರ ಮತ್ತು ರಾಜ್ಯದ ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಸಿಗಬೇಕು, ಕನ್ನಡದಲ್ಲಿ ವ್ಯವಹಾರಕ್ಕೆ ಆದ್ಯತೆ ಸಿಗಬೇಕು ಈ ನಿಟ್ಟಿನಲ್ಲಿ ವರದಿಯ ಅನುಷ್ಠಾನ ಕುರಿತು ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದರು. ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಡಾ ಸರೋಜಿನಿ ಮಹಿಷಿ ವರದಿಯ ಪುನರ್ ಪರಿಶೀಲನಾ ಸಮಿತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವರದಿ ಸಲ್ಲಿಸಿದ ಸಂಧರ್ಭದಲ್ಲಿ ಅವರು ಮಾತನಾಡಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ