ಮಹಾರಾಷ್ಟ್ರದೊಂದಿಗೆ ನೀರು ಬಿಡುವ ಚರ್ಚೆಯಾಗಿದೆ ಎಂದ ಸಿಎಂ ಯಡಿಯೂರಪ್ಪ

ಗುರುವಾರ, 17 ಅಕ್ಟೋಬರ್ 2019 (19:44 IST)
ಮಹಾರಾಷ್ಟ್ರ ಸರಕಾರದೊಂದಿಗೆ ನೀರು ಬಿಡುಗಡೆ ಮಾಡೋ ಕುರಿತು ಚರ್ಚೆ ನಡೆಸಲಾಗಿದೆ ಅಂತ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಬೇಸಿಗೆ ಸಂದರ್ಭದಲ್ಲಿ ರಾಜ್ಯದ ಗಡಿ ಜಿಲ್ಲೆಗಳ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಮಹಾರಾಷ್ಡ್ರದಿಂದ ರಾಜ್ಯದ ಕೃಷ್ಣಾ ಮತ್ತು ಭೀಮಾ ನದಿಗೆ 4 ಟಿ.ಎಂ.ಸಿ ನೀರು ಬಿಡುಗಡೆ ಮಾಡಬೇಕು. ಹೀಗಂತ ಅಲ್ಲಿನ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಳ್ಳುವ ಕುರಿತಂತೆ ಚರ್ಚೆ ನಡೆಸಿದ್ದೇನೆ ಅಂತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಇದಕ್ಕೆ ಬದಲಾಗಿ ರಾಜ್ಯದ ತುಬಚಿ ಏತ ನೀರಾವರಿ ಯೋಜನೆಯಿಂದ ಮಹಾರಾಷ್ಟ್ರದ ಬೋರಸಿ ನದಿಗೆ ನೀರಿನ ಲಭ್ಯತೆ ನೋಡಿಕೊಂಡು ಮಹಾರಾಷ್ಡ್ರಕ್ಕೆ ನೀರು ಬಿಡಲು ಆಲೋಚನೆ ನಡೆದಿದೆ. ಯಾವುದೇ ಅಂತಿಮ ತೀರ್ಮಾನ ಮಾಡಿಲ್ಲ. ಮಹಾರಾಷ್ಟ್ರದ ಚುನಾವಣಾ ಪ್ರಚಾರದಲ್ಲಿಯೂ ಸಹ ಇದೇ ಮಾತನ್ನು ಹೇಳಿದ್ದೇನೆ ಎಂದಿದ್ದೇನೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ