ನನನ್ನು ನೋಡಲು ಬರುವಾಗ ಹಾರ ತುರಾಯಿ ತರಬೇಡಿ ಎಂದು ಮನವಿ ಮಾಡಿದ ಸಿಎಂ ಯಡಿಯೂರಪ್ಪ
‘ನನ್ನನ್ನು ಭೇಟಿ ಮಾಡಿ ಶುಭ ಕೋರಲು ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳು, ಕಾರ್ಯಕರ್ತರು ಬರುತ್ತಿರುವುದು ಸಂತೋಷ ತಂದಿದೆ. ರಾಜ್ಯದಲ್ಲಿ ಬರ ತಾಂಡವವಾಡುತ್ತಿದೆ, ಈ ಸಂದರ್ಭದಲ್ಲಿ ನೀವುಗಳು ಹೂಗುಚ್ಛ, ಹಾರ, ಶಾಲುಗಳನ್ನು ತರುವ ಮೂಲಕ ವೆಚ್ಚ ಮಾಡುವುದು ಬೇಡ. ನಿಮ್ಮ ಹಾರೈಕೆಯೇ ನನಗೆ ದೊಡ್ಡ ಉಡುಗೊರೆ. ದಯವಿಟ್ಟು ಸಹಕರಿಸಿ’ ಎಂದು ಸಿಎಂ ಟ್ವಿಟರ್ ಮೂಲಕ ಮನವಿ ಮಾಡಿದ್ದಾರೆ.