ಕಾಫಿ-ತಿಂಡಿ ಬೆಲೆ ಶೇ.10 ಏರಿಕೆ ಸಾಧ್ಯತೆ

ಬುಧವಾರ, 5 ಏಪ್ರಿಲ್ 2023 (16:04 IST)
ಹೋಟೆಲ್‌ ಖಾದ್ಯ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದೆ.. ಹೋಟೆಲ್ ಫುಡ್ ತಿನ್ನೋರಿಗೆ ಶೀಘ್ರದಲ್ಲಿ ದರ ಏರಿಕೆಯ ಬರೆ ಬಿಳಲಿದೆ.. ಅಡುಗೆ ಸಾಮಗ್ರಿ, LPG ದರ ಹೆಚ್ಚಳ ಹಿನ್ನೆಲೆ, ಊಟದ ಬೆಲೆ ಹೆಚ್ಚಳಕ್ಕೆ ಹೋಟೆಲ್ ಮಾಲೀಕರು ಮುಂದಾಗಿದ್ದಾರೆ. ದರ ಏರಿಕೆ ವಿಚಾರವಾಗಿ ಇಂದು ಹೋಟೆಲ್ ಮಾಲೀಕರ ಸಂಘದಿಂದ ಮಹತ್ವದ ಸಭೆ ನಡೆಯಲಿದ್ದು.. ಮತ್ತೊಮ್ಮೆ ಕಾಫಿ-ತಿಂಡಿ ಬೆಲೆ ಶೇ.10ರಷ್ಟು ಏರಿಕೆಯಾಗುವ ಸಾಧ್ಯತೆಯಿದೆ.. ವಾಣಿಜ್ಯ ಬಳಕೆಯ ಅಡುಗೆ ಅನಿಲ, ಹಾಲು, ತುಪ್ಪ, ಬೆಣ್ಣೆ ಹಾಗೂ ಇತರೆ ಆಹಾರ ಪದಾರ್ಥಗಳ ಬೆಲೆ ಹೆಚ್ಚಳವಾದ ಹಿನ್ನೆಲೆಯಲ್ಲಿ, ತಿಂಡಿಗಳ ಬೆಲೆ ಹೆಚ್ಚಳಕ್ಕೆ ಹೋಟೆಲ್‌ ಮಾಲೀಕರು ನಿರ್ಧಾರ ಮಾಡಿದ್ದಾರೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ