ನಮ್ಮದು ಗ್ರೀನ್ ಝೋನ್ , ನಮ್ಮದು ಆರೆಂಜ್ ಝೋನ್ ಇಲ್ಲೆಲ್ಲಾ ಮದ್ಯದ ಅಂಗಡಿಗಳು ಓಪನ್ ಆಗೋದು ಪಕ್ಕಾ ಅಂತ ಬಾಟಲ್ ಗಳ ಮೇಲೆ ಕಣ್ಣು ಇಟ್ಟುಕೊಂಡು ಮಾತನಾಡುತ್ತಿದ್ದ ಕುಡುಕರ ಆಸೆ ಮತ್ತೆ ನಿರಾಸೆಯಾಗಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಮೇ 3 ರವರೆಗೆ ಮದ್ಯ ಮಾರಾಟಕ್ಕೆ ಅನುಮತಿ ನೀಡೋದು ಬೇಡ ಎಂಬ ನಿಲುವಿಗೆ ಸರಕಾರ ಬಂದಿದೆ.
ಹೀಗಾಗಿ ಜನರ ಒತ್ತಡ ಹಾಗೂ ವ್ಯಾಪಾರಿಗಳು ಹಾಗೂ ಜನಪ್ರತಿನಿಧಿಗಳ ಒತ್ತಡ ತಂತ್ರಕ್ಕೆ ಸರಕಾರ ಮಣೆ ಹಾಕಿಲ್ಲ. ಲಾಕ್ ಡೌನ್ ಸಡಿಲಿಕೆ ಮಾಡುವವರೆಗೂ ಮದ್ಯ ಮಾರಾಟ ಬೇಡವಂತೆ ಕೆಲವು ಸಚಿವರು ವಿರೋಧ ವ್ಯಕ್ತಪಡಿಸಿದ್ದಾರೆ.
ಇದರಿಂದಾಗಿ ಮೇ 3 ರ ಬಳಿಕ ಮದ್ಯ ಮಾರಾಟಕ್ಕೆ ಅನುಮತಿ ನೀಡಬೇಕೋ? ಬೇಡವೋ ಎಂಬ ಬಗ್ಗೆ ಚಿಂತನೆ ಮಾಡೋಣ ಅಂತ ಸಿಎಂ ಹೇಳಿದ್ದಾರೆ.