ನೂರಾರು ಲೀಟರ್ ಗೋವಾ ಮದ್ಯ ಕಂಟೆನರ್‌ನಲ್ಲಿ ಸಾಗಾಟ
ನೂರಾರು ಲೀಟರ್ ಗೋವಾ ಮದ್ಯವನ್ನು ಅಕ್ರಮವಾಗಿ ಕಂಟೆನರ್ ನಲ್ಲಿ ಸಾಗಿಸುತ್ತಿದ್ದ ಪ್ರಕರಣ ಬಯಲಿಗೆ ಬಂದಿದೆ.
ತಮಿಳುನಾಡು ಮೂಲದ ಸುಂದರರಾಜ್ ರಾಮಸ್ವಾಮಿ (45) ಬಂಧಿತ ಲಾರಿ ಚಾಲಕ. ಈತ ಮಧ್ಯಾಹ್ನ ಕಂಟೆನರ್ ಲಾರಿ (ಟಿಎನ್ 34 ವೈ3090)ಯಲ್ಲಿ ಸುಮಾರು ನೂರಾರು ಲೀಟರ್ ಗೋವಾ ಮದ್ಯವನ್ನು ತುಂಬಿಕೊಂಡು ಗೋವಾದಿಂದ ರಾಮನಗರ ಕಡೆಗೆ ಸಾಗುತ್ತಿದ್ದ. ಅನಮೋಡ್ ತನಿಖಾ ಠಾಣೆಯಲ್ಲಿ ಅಬಕಾರಿ ಸಿಬ್ಬಂದಿಗಳು ಲಾರಿಯನ್ನು ತಡೆದು ತಪಾಸಣೆ ಮಾಡಿದಾಗ ಅಕ್ರಮ ಮದ್ಯ ಪತ್ತೆಯಾಗಿದೆ.
ಮದ್ಯ ಮತ್ತು ಲಾರಿಯ ಅಂದಾಜು ಮೌಲ್ಯ 29,93,817 ರೂಪಾಯಿ ಎಂದು ಅಂದಾಜಿಸಲಾಗಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.