ಮನೆ ಬಾಗಿಲಿಗೆ ಬರುತ್ತಿವೆ ತಾಜಾ ಹಣ್ಣುಗಳು

ಮಂಗಳವಾರ, 28 ಏಪ್ರಿಲ್ 2020 (18:56 IST)
ಲಾಕ್ ಡೌನ್ ಇರುವಾಗ ಬೇಸಿಗೆ ಜನರನ್ನು ಬಾಧಿಸುತ್ತಿದೆ. ಬೇಸಿಗೆಯ ಸಮಯ ಇದಾಗಿರುವುದರಿಂದ ಜನರ ಮನೆ ಬಾಗಿಲಿಗೆ ತಾಜಾ ಹಣ್ಣುಗಳು ಬರುತ್ತಿವೆ.

ಕೊರೊನಾ ಹಿನ್ನೆಲೆಯಲ್ಲಿ ಜನಸಂದಣಿಯನ್ನು ನಿಯಂತ್ರಿಸುವುದರ ಜೊತೆಗೆ ಬೇಸಿಗೆಯ ಸಮಯ ಇದಾಗಿರುವುದರಿಂದ ಸಾರ್ವಜನಿಕರಿಗೆ ರೈತರಿಂದ ನೇರವಾಗಿ ಖರೀದಿಸಿದ ತಾಜಾ ಕಲ್ಲಂಗಡಿ, ದ್ರಾಕ್ಷಿ, ಮೋಸಂಬಿ ಹಣ್ಣುಗಳನ್ನು ಮನೆಯ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಜಾರಿಯಾಗಿದೆ.  

ಜಿಲ್ಲೆಯ ರೈತರಿಂದ ನೇರವಾಗಿ ಹಣ್ಣುಗಳನ್ನು ಖರೀದಿಸಿ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ.

ಗ್ರಾಹಕರ ಮನೆ ಬಾಗಿಲಿಗೆ ಹಣ್ಣು ತಲುಪಿಸಲು ಅಜೀಂ ಪ್ರೇಮಜೀ ಸಂಸ್ಥೆಯು ವಾಹನ ಸೌಲಭ್ಯ ಒದಗಿಸಿದೆ. ಕಲಬುರಗಿ ನಗರದ ಸಾರ್ವಜನಿಕರು ಮತ್ತು ಗ್ರಾಹಕರು ಪರಮೇಶ್ವರ ಎಫ್.ಪಿ.ಓ. & ಸಿಇಓ ಇವರ ಮೊಬೈಲ್ ಸಂಖ್ಯೆ-9945682437 ಸಂಪರ್ಕಿಸಿ ತಮ್ಮ ಬೇಡಿಕೆ ಸಲ್ಲಿಸಿ ಪಡೆಯಬಹುದಾಗಿದೆ.

ಅಂದಂಗೆ ಕಲ್ಲಂಗಡಿ, ದ್ರಾಕ್ಷಿ, ಮೋಸಂಬಿ ಹಣ್ಣುಗಳ ಕನಿಷ್ಠ ಬೇಡಿಕೆಯು 5 ಕೆ.ಜಿ.ಗೆ ಮೇಲ್ಟಟ್ಟು ಸಲ್ಲಿಸಿದ್ದಲ್ಲಿ ಮಾತ್ರ ಗ್ರಾಹಕರ ಮನೆ ಬಾಗಿಲಿಗೆ ಸೇವೆ ನೀಡಲಾಗುತ್ತದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ