ಹೈಕೋರ್ಟ್ ವರ ಕೊಟ್ರೂ ಆಯುಕ್ತರು ಬಿಡ್ತಿಲ್ಲ?

ಶನಿವಾರ, 16 ಸೆಪ್ಟಂಬರ್ 2023 (09:00 IST)
ಹುಬ್ಬಳ್ಳಿ : ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡದರೂ ಪಾಲಿಕೆ ಆಯುಕ್ತರು ಬಿಡುತ್ತಿಲ್ಲ. ಈದ್ಗಾದಲ್ಲಿ ಗಣೇಶೋತ್ಸವ ಸಂಬಂಧ ಪಾಲಿಕೆ ಹೊರಡಿಸಿದ್ದ ಠರಾವು ಪ್ರಶ್ನಿಸಿ ಅಂಜುಮನ್ ಇಸ್ಲಾಂ ಸಂಸ್ಥೆ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಧಾರವಾಡ ಹೈಕೋರ್ಟ್ ಪೀಠ ವಜಾ ಮಾಡಿದೆ.

ಈ ಮೂಲಕ ಪಾಲಿಕೆ ಹೊರಡಿಸಿದ್ದ ಠರಾವು ಪ್ರಕಾರ ಮೂರು ದಿನ ಈದ್ಗಾ ಮೈದಾನದಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸಲು ಇದ್ದ ಅಡೆತಡೆ ನಿವಾರಣೆಯಾಯ್ತು ಎಂದು ಎಲ್ಲರೂ ಭಾವಿಸಿದ್ರು. ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರು ಸಂಭ್ರಮಾಚರಣೆ ಕೂಡ ಮಾಡಿದ್ರು.

ದಲಿತ ಸಂಘಟನೆಗಳು ಮಾತ್ರ ಈದ್ಗಾದಲ್ಲಿ ಗಣೇಶನನ್ನು ಕೂರಿಸಲು ಅವಕಾಶ ನೀಡಬಾರದು ಎಂದು ಡಿಸಿ ಕಚೇರಿ ಬಳಿ ಪ್ರತಿಭಟನೆ ನಡೆಸಿದವು. ಆದರೆ ಇದಕ್ಕೆ ಮಣೆ ಹಾಕಲ್ಲ ಅಂತಾ ಮೇಯರ್ ಹೇಳಿದ್ರು. ಇಷ್ಟೆಲ್ಲಾ ಆದ್ಮೇಲೂ ಪಾಲಿಕೆ ಆಯುಕ್ತರ ತಕರಾರು ಮುಂದುವರಿದಿದೆ.

ಗಣೇಶ ಪ್ರತಿಷ್ಠಾಪನೆಗೆ ಅನುಮತಿ ನೀಡಲು ಆಯುಕ್ತರು ಇನ್ನೂ ಮೀನಾಮೇಷ ಎಣಿಸ್ತಿದ್ದಾರೆ. ನನಗೆ ಇನ್ನೂ ಕೋರ್ಟ್ ಪ್ರತಿ ಸಿಕ್ಕಿಲ್ಲ ಎಂಬ ಸಬೂಬು ಹೇಳ್ತಿದ್ದಾರೆ. ಇದರಿಂದ ಕೇಸರಿ ಪಡೆ ಮತ್ತೆ ಕೆರಳಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ