ಕಲಾವಿದರಿಗೆ ಹಣ ಎಸೆದಿದ್ದ ಡಿಕೆಶಿ ವಿರುದ್ಧ ದೂರು

ಶುಕ್ರವಾರ, 31 ಮಾರ್ಚ್ 2023 (08:38 IST)
ಮಂಡ್ಯ : ಎರಡು ದಿನಗಳ ಹಿಂದೆಯಷ್ಟೇ ಪ್ರಜಾಧ್ವನಿ ಯಾತ್ರೆ ವೇಳೆ 500 ರೂ. ನೋಟುಗಳನ್ನು ಎರಚಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
 
ಪ್ರಜಾಧ್ವನಿ ಯಾತ್ರೆಯ ಭಾಗವಾಗಿ ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ರೋಡ್ಶೋ ನಡೆಸಲಾಗಿತ್ತು. ರೋಡ್ ಶೋನಲ್ಲಿ ಜನಪದ ಕಲಾತಂಡಗಳು ಭಾಗವಹಿಸಿದ್ದವು. ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಜನಪದ ಕಲಾವಿದರಿಗೆ ಬೇವಿನಹಳ್ಳಿ ಗ್ರಾಮದಲ್ಲಿ ಹಣ ಕೊಡುವಾಗ ಡಿ.ಕೆ ಶಿವಕುಮಾರ್ ಬಸ್ಸಿನ ಮೇಲಿಂದಲೇ 500 ರೂ. ಮುಖಬೆಲೆಯ ನೋಟುಗಳನ್ನು ಎರಚಿದ್ದರು. 

ಈ ಸಂಬಂಧ ಡಿಕೆ ಶಿವಕುಮಾರ್ ವಿರುದ್ಧ ಆರ್ಸಿ ಆಕ್ಟ್ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಪಿ. ಅಶೋಕ್ ಎಂಬ ವ್ಯಕ್ತಿ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ