ಬಿಬಿಎಂಪಿ ವಿರುದ್ಧ ಪೊಲೀಸ್ ಠಾಣೆಗೆ ದೂರು?

ಮಂಗಳವಾರ, 7 ಮಾರ್ಚ್ 2023 (09:20 IST)
ಬೆಂಗಳೂರು : ಟೆಂಡರ್ ಕೂಗೋದು, ಟೆಂಡರ್ ಆದ್ಮೇಲೆ ಬಿಲ್ ಬಾಕಿ ವಿಚಾರಗಳು ಆಗಾಗ ಬಿಬಿಎಂಪಿಯಲ್ಲಿ ಸದ್ದು ಮಾಡುತ್ತಲೇ ಇರುತ್ತವೆ. ಈಗ ಬಿಬಿಎಂಪಿ ಸೊಳ್ಳೆ ಔಷಧಿ ಸಿಂಪಡಿಸಿದ ಬಿಲ್ಗಾಗಿ ಗಲಾಟೆಯಾಗಿದೆ.
 
ದಯಮಾಡಿ ಹಣ ಬಿಡುಗಡೆ ಮಾಡಿ ಅಂದ್ರೆ ಅಧಿಕಾರಿ ನಮ್ಮ ಮೇಲೆ ದೌರ್ಜನ್ಯ ಮಾಡಿದ್ದಾರೆ ಎಂಬ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಸೊಳ್ಳೆ ಔಷಧಿ ಸಿಂಪಡಿಸಿದ ಬಿಲ್ ಕೇಳಿದ್ರೆ ಬಿಬಿಎಂಪಿ ಅಧಿಕಾರಿಗಳು ದರ್ಪ ಪ್ರದರ್ಶಿಸಿರುವ ಆರೋಪ ಕೇಳಿಬಂದಿದೆ. ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿ ದೂರು ದಾಖಲಿಸಿದ್ದು, ಟೆಂಡರ್ ಕರೆಯದೆ, ಬಾಕಿ ಬಿಲ್ ಪಾವತಿಸದ ಹಿನ್ನೆಲೆಯಲ್ಲಿ ಬಿಬಿಎಂಪಿ ಸೊಳ್ಳೆ ಔಷಧಿ ಸಿಂಪಡಿಸಿದ ಬಿಲ್ಗಾಗಿ ಆಗ್ರಹಿಸಿದಾಗ ನಮ್ಮ ಮೇಲೆ ದೌರ್ಜನ್ಯ ಮಾಡಿದ್ದಾರೆ.

ಕಳೆದ 2 ವರ್ಷಗಳಿಂದ 5 ಕೋಟಿ ಬಿಲ್ ಬಾಕಿಯನ್ನು ಬಿಬಿಎಂಪಿ ಉಳಿಸಿಕೊಂಡಿದೆ. ಈ ಬಿಲ್ ಕ್ಲಿಯರ್ ಮಾಡಲು ಮನವಿ ಮಾಡಿಕೊಳ್ಳಲು ಹೋದಾಗ ಸ್ಪೆಷಲ್ ಕಮಿಷನರ್ ಅನುಚಿತವಾಗಿ ವರ್ತನೆ ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ