ಹಳ್ಳ ಹಿಡಿದ ಬಿಬಿಎಂಪಿಯ ಬಹು ನಿರೀಕ್ಷಿತ ನಮ್ಮ ಕ್ಲಿನಿಕ್

ಸೋಮವಾರ, 6 ಮಾರ್ಚ್ 2023 (17:12 IST)
ಬಡವರಿಗೆ, ಕೂಲಿ ಕಾರ್ಮಿಕರಿಗೆ ಅಂತ ನಿರ್ಮಿಸಿದ ನಮ್ಮ ಕ್ಲಿನಿಕ್ ಗೆ ರೋಗಿಗಳು ಬಾರದೆ ಹಳ್ಳ ಹಿಡಿದಿದೆ.ಬೆಂಗಳೂರಿನಲ್ಲಿ ಒಟ್ಟು 108 ನಮ್ಮ ಕ್ಲಿನಿಕ್ ಓಪನ್ ಆಗಿದೆ.108 ಕ್ಲಿನಿಕ್ ನಲ್ಲೂ ಪ್ರತಿದಿನ ಲೆಕ್ಕ ಹಾಕಿದ್ರು 108 ರೋಗಿಗಳು ಬರ್ತಿಲ್ಲ.ಕಾಟಾಚಾರಕ್ಕೆ ಕ್ಲಿನಿಕ್ ಓಪನ್ ಮಾಡಿ ಬಿಲ್ಡಪ್ ಕೊಡ್ತಾ ಸರ್ಕಾರ?ನಮ್ಮ ಕ್ಲಿನಿಕ್ ಅವಧಿ ಬದಲಾವಣೆಗೆ ಪ್ಲಾನ್  ಮಾಡಲಾಗಿದೆ.ಬಿಬಿಎಂಪಿ ಮುಖ್ಯ ಅರೋಗ್ಯಾಧಿಕಾರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿದ್ದಾರೆ.
 
ನಮ್ಮ ಕ್ಲಿನಿಕ್ ಫ್ಲಾಪ್ ಆಗಲು ಹಲವು ಕಾರಣಗಲಿವೆ.ನಮ್ಮ ಕ್ಲಿನಿಕ್ ಓಪನ್ ಮಾಡೋದು ಬೆಳಿಗ್ಗೆ 9  ಗಂಟೆಗೆ.ಮತ್ತೆ 1.30 ಕ್ಕೆ ಕ್ಲೋಸ್‌.ಮತ್ತೆ 2 ಗಂಟೆಗೆ ಓಪನ್ ಮಾಡಿದ್ರೆ 4.30 ಕ್ಕೆ ಬಾಗಿಲು ಹಾಕ್ತಾರೆ.ಇದರಿಂದ ರೋಗಿಗಳು ನಮ್ಮ ಕ್ಲಿನಿಕ್ ಗೆ ಬರ್ತಿಲ್ಲ.ಇನ್ನು  ಈ ಕ್ಲಿನಿಕ್ ಗೆ ಬರುವವರು ಬಡವರು.ಕೂಲಿ ಕಾರ್ಮಿಕರು ,ಕೂಲಿ ಕಾರ್ಮಿಕರು ಬೆಳಿಗ್ಗೆ ಕೆಲಸ ಕಾರ್ಯಗಳಿಗೆ ಹೋದ್ರೆ ಸಂಜೆ ಬರೋದು 6 ಗಂಟೆ 7 ಗಂಟೆಗೆ ,ಸಂಜೆ 4.30 ಕ್ಕೆ ಬಾಗಿಲು ಹಾಕಿಕೊಂಡು ಹೋದ್ರೆ ಬಡರೋಗಿಗಳು ಬರಲು ಆಗಲ್ಲ,ರಾತ್ರಿ  8 ಗಂಟೆ .ಅಥವಾ  9 ಗಂಟೆಯವರೆಗೆ ಓಪನ್ ಮಾಡಿ ಅಂತಾ  ಸಾರ್ವಜನಿಕರು ಮನವಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ