ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಪ್ರಮುಖ ಕಾರಣಗಳಾಗಿದ್ದ ಐದು ಗ್ಯಾರಂಟಿ ಘೋಷಣೆಗಳು ದೊಡ್ಡ ಸದ್ದು ಗದ್ದಲಕ್ಕೆ ಕಾರಣವಾಗಿದ್ದವು. ಆದರೆ ಇದೀಗ ಅದರ ಜಾರಿಗೆ ಕೆಲವೊಂದು ಕಂಡೀಷನ್ಸ್ ಅಪೈ ಆಗಲಿದೆ ಎಂದು ಪ್ರಣಾಳಿಕೆ ಸಮಿತಿಯ ಅಧ್ಯಕ್ಷರಾಗಿದ್ದ ಡಾ. ಜಿ ಪರಮೇಶ್ವರ್ ಹೇಳಿಕೆ ಕುತೂಹಲಕ್ಕೆ ಕಾರಣವಾಗಿದೆ.....ಬೆಂಗಳೂರಿನಲ್ಲಿ ಇಂದು ಮಾತನಾಡಿದ ಅವರು, ಮೊದಲ ಕ್ಯಾಬಿನೆಟ್ ನಲ್ಲಿ 5 ಗ್ಯಾರಂಟಿ ಈಡೇರಿಸುವ ಭರವಸೆ ಕೊಟ್ಟಿದ್ದೇವೆ.ಅದಕ್ಕೆ ನಾವು ಬದ್ಧರಾಗಿ ಇರುತ್ತೇವೆ ಹಾಗೂ ಮೊದಲ ಕ್ಯಾಬಿನೆಟ್ ನಲ್ಲಿ ಜಾರಿ ಮಾಡ್ತೀವಿ..ಗ್ಯಾರಂಟಿಗಳನ್ನ ಪ್ರಾಕ್ಟಿಕಲ್ ಆಗಿ ಜಾರಿ ಮಾಡುತ್ತೇವೆ. ಆಯಾ ಇಲಾಖೆ ಸಚಿವರು ಕೂತು ಇದರ ಬಗ್ಗೆ ವರ್ಕ್ ಮಾಡಿ ಜಾರಿ ಮಾಡ್ತೀವಿ. ಆದರೆ ಗ್ಯಾರಂಟಿಗಳಿಗೆ ಕಂಡಿಷನ್ ಇರುತ್ತದೆ. ಹಾಗೇ ಕೊಟ್ಟರೆ ಸುಮ್ಮನೆ ಕೊಟ್ಟರೆ ಎಲ್ಲರೂ ತೆಗೆದುಕೊಳ್ಳುತ್ತಾರೆ ಹೊಸ ಬಾಂಬ್ ಸಿಡಿಸಿದ್ದಾರೆ. ಇನ್ನೂ ತಾವು ಸಹ ಸಿಎಂ ಆಕಾಂಕ್ಷಿಗಳೇ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು,2013 ರಲ್ಲಿ ಪರಮೇಶ್ವರಗೆ ಅನ್ಯಾಯ ಆಯ್ತು. ನಾನು ಪಕ್ಷದ ವರಿಷ್ಠರನ್ನ ನಂಬಿದ್ದೇನೆ...ನಾನು 50 ಶಾಸಕರ ಗುಂಪು ಕಟ್ಟಿಕೊಂಡು ಹೋಗಬಹುದು. ಆದರೆ ನಾನು ಹಾಗೆ ಮಾಡೊಲ್ಲ.ನನಗೆ ಪ್ರಿನ್ಸಿಪಲ್ ಇದೆ.ನನಗೆ ಶಿಸ್ತು ಮುಖ್ಯ.ಹೈಕಮಾಂಡ್ ಜವಾಬ್ದಾರಿ ಕೊಟ್ಟರೆ ಖಂಡಿತ ಮಾಡ್ತೀನಿ.ಅವಕಾಶ ಕೊಟ್ಟರೆ ಮಾಡೊಲ್ಲ ಅಂತ ಹೇಳೊಲ್ಲ.ಸುಮ್ಮನೆ ಇದ್ದೇನೆ ಅಂದರೆ ಅಸಮರ್ಥ ಅಂತ ಅಲ್ಲ ನಾನು ಸಮರ್ಥನೆ ಪರೋಕ್ಷವಾಗಿ ಡಿಕೆಶಿವಕುಮಾರ್, ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿದ್ದಾರೆ