ಸೈದ್ದಾಂತಿಕ ಹೋರಾಟ ಮುಂದುವರೆಸ್ತೇವೆ: ಸಿಟಿ ರವಿ

ಮಂಗಳವಾರ, 16 ಮೇ 2023 (19:17 IST)
ಆರ್.ಟಿ.ನಗರದಲ್ಲಿ ಹಂಗಾಮಿ ಸಿಎಂರನ್ನ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ ಭೇಟಿ ಮಾಡಿದರು. ಭೇಟಿ ಬಳಿಕ ಮಾತನಾಡಿದ ಸಿ.ಟಿ.ರವಿ, ಚುನಾವಣೆ ಈ ರೀತಿ ಆಗೋಕೆ ಕಾರಣ ಏನು ಅನ್ನೋದರ ಚರ್ಚೆಯಾಗಿದೆ. ಫಲಿತಾಂಶದ ಬಗ್ಗೆ ಅವಲೋಕನ  ಮಾಡಿಕೊಳ್ಳುವ ಅವಶ್ಯಕತೆಯಿದೆ. ಸೈದ್ದಾಂತಿಕ ಹೋರಾಟ ಮುಂದುವರೆಸ್ತೇವೆ. ಈ ಫಲಿತಾಂಶ ನಿರೀಕ್ಷೆ ಮಾಡಿರಲಿಲ್ಲ. ಹಲಾಲ್, ಹಿಜಾಬ್, ದೇವಸ್ಥಾನಗಳಿಗೆ ನಿರ್ಬಂಧ ವಿಚಾರವಾಗಿ ಮಾತನಾಡಿದ ಅವರು, ಗೋಹತ್ಯೆಗೆ, ಲವ್ ಜಿಹಾದ್ ಗೆ ಪ್ರಚೋದನೆ ಕೊಡುವಂತಹ ಮತಿಯವಾದಿ ಶಕ್ತಿಗಳು ಬಲವಾಗಿವೆ. ಅಂತಹ ಶಕ್ತಿಗಳಿಗೆ ಇಗ ನೀರು ಗೊಬ್ಬರ ಹಾಕಿದಂತೆ ಆಗುತ್ತೆ. ಡಿಜೆಹಳ್ಳಿ- ಕೆಜೆಹಳ್ಳಿಯಂತಹ ನೂರಾರು ಪ್ರಕರಣಗಳು ಬೆಳೆಯಬಹುದು. ಕಾನೂನು ಸುವ್ಯವಸ್ಥೆ ಕೈತಪ್ಪಬಹುದು. ಅದು ಕೂಡ ಕಾಂಗ್ರೆಸ್ ಗೆ ಮುಂದೊಂದು ದಿನ ಮುಳುವಾಗಬಹುದು ಎಂದರು. ಗ್ಯಾರಂಟಿ ಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಗ್ಯಾರಂಟಿ ಕಾರ್ಡ್ ಪ್ರಿಂಟ್ ಮಾಡಿ ಹಂಚಿರೋರಿಗೆ ಜವಾಬ್ದಾರಿ ಇರುತ್ತೆ. ವಿದ್ಯುತ್, ಎಲ್ಲರ ಮನೆಗೆ ದುಡ್ಡು ಹಾಕೋದು ಹಾಕ್ಲಿ. ಹತ್ತತ್ತು ಕೆಜಿ ಅಕ್ಕಿ ಕೊಡ್ತಿವಿ ಅಂತ ಹೇಳಿದ್ದಾರೆ ಒಳ್ಳೆದಾಗ್ಲಿ ಅಂದ್ರು.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ