ಮೂರನೇ ಬಾರಿ ಪ್ರಧಾನಿಯಾಗುತ್ತಿರುವ ಮೋದಿಗೆ ಅಭಿನಂದನೆಗಳು: ಎಚ್‌ ಡಿ ಕುಮಾರಸ್ವಾಮಿ

sampriya

ಮಂಗಳವಾರ, 4 ಜೂನ್ 2024 (21:03 IST)
Photo By X
ಬೆಂಗಳೂರು: ಸತತ 3ನೇ ಅವಧಿಗೆ ಪ್ರಧಾನಿ ಆಗುತ್ತಿರುವ ನರೇಂದ್ರ ಮೋದಿ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು ಎಂದು ಮಾಜಿ ಸಿಎಂ ಎಚ್‌ ಡಿ ಕುಮಾರಸ್ವಾಮಿ ಅವರು ಅಭಿನಂದನೆ ಸಲ್ಲಿಸಿದರು. 

ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ಎಚ್‌ ಡಿ ಕುಮಾರಸ್ವಾಮಿ ಅವರು, ಸತತ 3ನೇ ಅವಧಿಗೆ ಪ್ರಧಾನ ಮಂತ್ರಿಗಳಾಗುತ್ತಿರುವ ಮಾನ್ಯ ಶ್ರೀ ನರೇಂದ್ರ ಮೋದಿ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು.

ಇಂಡಿಯಾ ನಡೆಸಿದ ವ್ಯವಸ್ಥಿತ, ಸಂಘಟಿತ ಅಪಪ್ರಚಾರದ ನಡುವೆಯೂ ಮೋದಿ ಅವರ ನೇತೃತ್ವದಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ ಸ್ಪಷ್ಟ ಬಹುಮತ ಸಾಧಿಸಿರುವುದು ನನಗೆ ಅತೀವ ಸಂತೋಷ ಉಂಟು ಮಾಡಿದೆ.

ಮಾನ್ಯ ಗೃಹ ಸಚಿವರಾದ ಅಮಿತ್‌ ಶಾ, ಬಿಜೆಪಿ ಅಧ್ಯಕ್ಷರಾದ ಜೆಪಿ ನಡ್ಡಾ ಅವರಿಗೆ ನನ್ನ ಕೃತಜ್ಞತೆಗಳು.

ಕರ್ನಾಟಕದಲ್ಲಿಯೂ ಜೆಡಿಎಸ್‌ ಮತ್ತು ಬಿಜೆಪಿ ಕರ್ನಾಟಕಮೈತ್ರಿಕೂಟ 19 ಕ್ಷೇತ್ರಗಳಲ್ಲಿ ಜಯಭೇರಿ ಮೊಳಗಿಸಿದೆ. ಮೈತ್ರಿ ಪಕ್ಷಗಳಿಗೆ ಆಶೀರ್ವಾದ ಮಾಡಿದ ರಾಜ್ಯದ ಸಮಸ್ತ ಜನತೆಗೆ ಹಾಗೂ ಉಭಯ ಪಕ್ಷಗಳ ಕಾರ್ಯಕರ್ತರು, ಮುಖಂಡರಿಗೆ ಅನಂತ ಧನ್ಯವಾದಗಳು.ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ