ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡಿನ ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ರಾಕ್ ಸ್ಮಾರಕದಲ್ಲಿ 45 ಗಂಟೆಗಳ ಸುದೀರ್ಘ ಧ್ಯಾನದಲ್ಲಿ ನಿರತರಾಗಿದ್ದಾರೆ. ಗುರುವಾರ ಸಂಜೆ 6:45 ರ ಸುಮಾರಿಗೆ ಧ್ಯಾನ ಆರಂಭಿಸಿದ ಅವರು ಇಂದು ಸಂಜೆಗೆ ವೇಳೆಗೆ ಅಂತ್ಯ ಮಾಡಲಿದ್ದಾರೆ.
ಇನ್ನೂ ಸುದೀರ್ಘವಾಗಿ ಧ್ಯಾನದಲ್ಲಿ ತೊಡಗಿಸಿಕೊಂಡಿರುವ ಮೋದಿ ಅವರು ದ್ರವ ಆಹಾರವನ್ನಷ್ಟೇ ಸೇವನೆ ಮಾಡಿದ್ದಾರೆ. ಎಳೆನೀರು, ದ್ರಾಕ್ಷಿ ರಸ ಮತ್ತು ಇತರ ದ್ರವಗಳನ್ನು ಸೇವಿಸಿದ್ದಾರೆ. ಅದಲ್ಲದೆ ಮೌನವಾಗಿ ಧ್ಯಾನದಲ್ಲಿರುವ ಮೋದಿ, ಧ್ಯಾನ ಮಂದಿರದಿಂದ ಹೊರಬಂದಿಲ್ಲ.
2024 ರ ಲೋಕಸಭಾ ಚುನಾವಣೆಯ ಪ್ರಚಾರದ ಅಂತ್ಯದೊಂದಿಗೆ ಮೋದಿ ಅವರು ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ರಾಕ್ ಸ್ಮಾರಕದಲ್ಲಿ ಧ್ಯಾನಕ್ಕೆ ಜಾರಿದ್ದಾರೆ. ಕುತೂಹಲಕಾರಿ ವಿಷಯ ಏನೆಂದರೆ 131 ವರ್ಷಗಳ ಹಿಂದೆ ಸ್ವಾಮಿ ವಿವೇಕಾನಂದರು ಧ್ಯಾನ ಮಾಡಿದ ಸ್ಥಳ ಇದಾಗಿದೆ.
ಇನ್ನೂ ಮೋದಿ ಭೇಟಿ ಹಿನ್ನೆಲೆ ಧ್ಯಾನ ಮಂದಿರದ ಸುತ್ತಾಮತ್ತಾ 2000ಸಾವಿರ ಪೊಲೀಸ್ ಸಿಬ್ಬಂದಿಯೊಂದಿಗೆ ಭದ್ರತೆ ಹೆಚ್ಚಿಸಲಾಗಿದೆ. ಅದಲ್ಲದೆ ಭಾರತೀಯ ಕೋಸ್ಟ್ ಗಾರ್ಡ್ ಮತ್ತು ಭಾರತೀಯ ನೌಕಾಪಡೆ ಬಿಗಿಯಾದ ಕಟ್ಟೆಚ್ಚರವನ್ನು ಕಾಯ್ದುಕೊಂಡಿದೆ.
ವಿವೇಕಾನಂದ ರಾಕ್ ಸ್ಮಾರಕಕ್ಕೆ ತೆರಳುವ ಮುನ್ನ ಪ್ರಧಾನಿ ಭಗವತಿ ಅಮ್ಮನ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಜೂನ್ 1 ರಂದು ನಿರ್ಗಮಿಸುವ ಮೊದಲು, ಮೋದಿ ಅವರು ಸ್ಮಾರಕದ ಪಕ್ಕದಲ್ಲಿರುವ ತಿರುವಳ್ಳುವರ್ ಪ್ರತಿಮೆಗೆ ಭೇಟಿ ನೀಡುವ ಸಾಧ್ಯತೆಯಿದೆ.
????????