ಬಿಜೆಪಿ ಸರ್ಕಾರಕ್ಕೆ ಎಸ್ಸಿ, ಎಸ್ಟಿ ಸಮಾಜದಿಂದ ಅಭಿನಂದನಾ ಸಮಾರಂಭ : ಸಚಿವ ನಾರಾಯಣಸ್ವಾಮಿ
ಬಿಜೆಪಿ ಸರ್ಕಾರಕ್ಕೆ ಎಸ್ಸಿ, ಎಸ್ಟಿ ಸಮಾಜದಿಂದ ಅಭಿನಂದನಾ ಸಮಾರಂಭವನ್ನು ಇದೇ 6ರಂದು ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಎ ನಾರಾಯಣಸ್ವಾಮಿ ತಿಳಿಸಿದ್ರು.ಈ ಬಗ್ಗೆ ಇಂದು ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು , ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮೀಸಲಾತಿಗೆ ಸಂಬಂಧಿಸಿದಂತೆ ತೆಗೆದುಕೊಂಡ ನಿರ್ಧಾರ ಅದರಲ್ಲೂ ಪರಿಶಿಷ್ಟ ಜಾತಿಗೆ ವಿಶೇಷವಾಗಿ ತೆಗೆದುಕೊಂಡ ನಿರ್ಧಾರಕ್ಕೆ ಸ್ವಾಗತಮಾಡಿದ್ದಾರೆ.....ಇದೇ ಏಪ್ರಿಲ್ 6ರಂದು ಸಿಎಂ, ಮೋರ್ಚಾ ಅಧ್ಯಕ್ಷರು ಹಾಗೂ ಕ್ಯಾಬಿನೆಟ್ ಸಬ್ ಕಮಿಟಿಗೆ ಸನ್ಮಾನ ಮಾಡಲು ತೀರ್ಮಾನಿಸಲಾಗಿದೆ.ಇನ್ನು ಈ ಕಾರ್ಯಕ್ರಮಕ್ಕೆ ಪರಿಶಿಷ್ಟ ಜಾತಿಯ ಎಲ್ಲಾ ಸಮುದಾಯಗಳು ಸಿಎಂಗೆ ಅಭಿನಂದನೆ ಸಲ್ಲಿಸಲು ನಿರ್ಧಾರ ಮಾಡಿದ್ದಾರೆ..ಪರಿಶಿಷ್ಟ ಸಮುದಾಯದಿಂದ ಕಾರ್ಯಕ್ರಮ ಆಯೋಹಿಸಿದ್ರೂ ವಿವಿಧ ಸಂಘಟನೆ, ಮೋರ್ಚಾಗಳು ಭಾಗಿಯಾಗಲಿವೆ ಎಂದು ತಿಳಿಸಿದ್ರು