JDS 2ನೇ ಪಟ್ಟಿ ಬಿಡುಗಡೆಗೆ ಕೌಂಟ್​​ ಡೌನ್

ಮಂಗಳವಾರ, 4 ಏಪ್ರಿಲ್ 2023 (19:01 IST)
JDSಗೆ 22 ಕ್ಷೇತ್ರದ್ದು ಒಂದು ಲೆಕ್ಕವಾದರೆ ಹಾಸನದ್ದೇ ಒಂದು ಲೆಕ್ಕ ಎಂಬಂತಾಗಿದೆ. ಗೌಡರ ಕುಟುಂಬಕ್ಕೆ ಹಾಸನ ಟಿಕೆಟ್‌ ಟೆನ್ಷನ್‌ ಇನ್ನೂ ತಪ್ಪಿಲ್ಲ. ಈ ಕುರಿತು ಮಾಜಿ ಪ್ರಧಾನಿ H.D. ದೇವೇಗೌಡರ ಮನೆಯಲ್ಲಿ ಸಂಧಾನ ನಡೆಸಿದ್ರು ಸಹ ಉತ್ತರ ಸಿಕ್ಕಿಲ್ಲ.. ಮಾಜಿ ಸಿಎಂ H.D.ಕುಮಾರಸ್ವಾಮಿಯವರ ಮಾತಿಗೆ ದೇವೇಗೌಡರು ಸಹಮತ ಸೂಚಿಸಿದ್ದು, ಭವಾನಿಗೆ ಟಿಕೆಟ್‌ ಇಲ್ಲ ಎಂದು ಗೌಡರು ಪರೋಕ್ಷ ಸಂದೇಶ ನೀಡಿದ್ದಾರೆ.. ಮಾಜಿ ಪ್ರಧಾನಿ ದೇವೇಗೌಡರ ಮಾತಿಗೆ ಭವಾನಿ ಬೇಸರ ವ್ಯಕ್ತಪಡಿಸಿದ್ದು, 15 ನಿಮಿಷದಲ್ಲೇ ಮನೆಯಿಂದ ಹೊರ ನಡೆದಿದ್ದಾರೆ. ಹೀಗಾಗಿ  JDS 2ನೇ ಪಟ್ಟಿ ರಿಲೀಸ್‌ ಆಗಬಹುದು ಎಂಬ ನಿರೀಕ್ಷೆ ಮನೆಮಾಡಿದೆ.. ಹಾಸನ ಬಿಟ್ಟು ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಲಿಸ್ಟ್‌ ರೆಡಿ ಮಾಡಿದ್ದು, ಇಂದು ಮಧ್ಯಾಹ್ನ JDS 2ನೇ ಪಟ್ಟಿ ಬಿಡುಗಡೆ ಸಾಧ್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ