10 ದಿನದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಭೆ: ರಾಹುಲ್ ಅಂತಿಮಾ ತೀರ್ಮಾನ ಏನು?
ಗುರುವಾರ, 23 ಮೇ 2019 (18:26 IST)
ಲೋಕಸಭೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಹಿನ್ನೆಲೆಯಲ್ಲಿ ಕಂಡಿರುವ ಬೆನ್ನಲ್ಲೇ ಮುಂದಿನ ಹತ್ತು ದಿನಗಳಲ್ಲಿ ತನ್ನ ಕಾರ್ಯಕಾರಿ ಸಭೆ ಕರೆದಿದೆ.
ಲೋಕಸಭೆ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿ ಭಾರೀ ಜಯಭೇರಿ ಭಾರಿಸಿದೆ. ಇದರ ಬೆನ್ನಲ್ಲೇ ಶಾಕ್ ಗೆ ಒಳಗಾಗಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಹುದ್ದೆಗೆ ರಾಜೀನಾಮೆಗೆ ಮುಂದಾಗಿದ್ದಾರೆ. ಆದರೆ ಸೋನಿಯಾಗಾಂಧಿ ರಾಜೀನಾಮೆ ನೀಡೋದು ಬೇಡ ಅಂತ ರಾಹುಲ್ ಗೆ ಹೇಳಿದ್ದಾರೆ.
ಏತನ್ಮಧ್ಯೆ ಲೋಕ ಸಮರದಲ್ಲಿ ಎನ್ ಡಿ ಎ 355 ಸ್ಥಾನಗಳನ್ನು ಗಳಿಸಿದ್ರೆ, ಯುಪಿಎ ಮೈತ್ರಿಕೂಟ 90 ಸ್ಥಾನಕ್ಕೆ ಹಾಗೂ ಇತರರು 97 ಸ್ಥಾನಗಳನ್ನು ತಮ್ಮದಾಗಿಸಿಕೊಳ್ಳುವಲ್ಲಿ ಬಹುತೇಕ ಸಫಲರಾಗಿದ್ದಾರೆ.
ಹೀಗಾಗಿ ಕಣದಲ್ಲಿದ್ದ ಇತರರಿಗಿಂತಲೂ ರಾಷ್ಟ್ರೀಯ ಪಕ್ಷವಾಗಿರುವ ಕಾಂಗ್ರೆಸ್ ಕಡಿಮೆ ಸ್ಥಾನ ಗಳಿಸಿರುವುದು ಆ ಪಕ್ಷದ ಮುಖಂಡರು ಮಾತ್ರವಲ್ಲ ವರಿಷ್ಠರನ್ನೇ ಕಂಗೆಡುವಂತೆ ಮಾಡಿದೆ. ಹೀನಾಯ ಸೋಲಿನ ನೈತಿಕ ಹೊಣೆ ಹೊತ್ತು ರಾಹುಲ್ ಗಾಂಧಿ ತಮ್ಮ ಮುಂದಿನ ನಡೆಯನ್ನು ಪಕ್ಷದ ಕಾರ್ಯಕಾರಿ ಸಭೆಯಲ್ಲಿ ತಿಳಿಸುವ ಸಾಧ್ಯತೆ ದಟ್ಟವಾಗಿದೆ.