ಪ್ರತ್ಯೇಕ ನಾಡಧ್ವಜ ವಿಚಾರಕ್ಕೆ ಕಾಂಗ್ರೆಸ್ ಹೈಕಮಾಂಡ್ ಮುನಿಸು?

ಶುಕ್ರವಾರ, 21 ಜುಲೈ 2017 (12:24 IST)
ಬೆಂಗಳೂರು: ಕರ್ನಾಟಕ ರಾಜ್ಯಕ್ಕೆ ಪ್ರತ್ಯೇಕ ನಾಡಧ್ವಜ ಬೇಕು ಎಂದು ಹೊರಟ ಸಿಎಂ ಸಿದ್ದರಾಮಯ್ಯಗೆ ಕಾಂಗ್ರೆಸ್ ಹೈಕಮಾಂಡ್ ನಿಂದಲೇ ತೀವ್ರ ವಿರೋಧ ವ್ಯಕ್ತವಾಗಿದೆ.

 
ಚುನಾವಣೆ ಹತ್ತಿರದಲ್ಲಿರುವಾಗ ಜನರಲ್ಲಿ ಗೊಂದಲ ಮೂಡಿಸುವಂತಹ ಇಂತಹ ವಿಚಾರಗಳನ್ನು ಸುಮ್ಮನೇ ಮೈ ಮೇಲೆ ಎಳೆದುಕೊಳ್ಳುವುದೇಕೆ ಎಂದು ಕಾಂಗ್ರೆಸ್ ಹೈಕಮಾಂಡ್ ರಾಜ್ಯ ಉಸ್ತುವಾರಿ ಕೆಸಿ ವೇಣುಗೋಪಾಲ್ ಮೂಲಕ ಸಿಎಂಗೆ ಸಂದೇಶ ರವಾನಿಸಿದೆ ಎನ್ನಲಾಗಿದೆ.

ಇದಕ್ಕೆ ಉತ್ತರಿಸಿರುವ ಸಿಎಂ ನಾವು ಸಂವಿಧಾನದಲ್ಲಿ ಇಂತಹದ್ದಕ್ಕೆ ಅವಕಾಶವಿದೆಯಾ ಎಂದು ಸಮಿತಿ ರಚನೆ ಮಾಡಿದ್ದೇವಷ್ಟೇ. ಪ್ರತ್ಯೇಕ ನಾಡಧ್ವಜ ತರುತ್ತೇವೆ ಅಥವಾ ಇಲ್ಲ ಎಂಬುದರ ಬಗ್ಗೆ ನಿರ್ಧಾರ ಕೈಗೊಂಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಕೆಸಿ ವೇಣುಗೋಪಾಲಗೆ ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆಯ ಹಿನ್ನಲೆಯಲ್ಲಿ ಪ್ರತ್ಯೇಕ ನಾಡಧ್ವಜ ವಿಚಾರ ಕೆಲವು ದಿನಗಳ ಮಟ್ಟಿಗೆ ತಣ್ಣಗಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ..  ಕೊನೆಗೂ ಲಾಂಚ್ ಆಯ್ತು ಉಚಿತ ರಿಲಯನ್ಸ್ ಜಿಯೋ ಫೋನ್.. ಏನೇನು ಇದೆ ಇದರಲ್ಲಿ?

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ