ಕಾಂಗ್ರೆಸ್ ಮಹತ್ವ ಸಭೆಗೆ ರಾಜ್ಯದ 37 ಜನಕ್ಕೆ ಆಹ್ವಾನ

ಸೋಮವಾರ, 31 ಜುಲೈ 2023 (20:34 IST)
ರಾಜ್ಯ ಕಾಂಗ್ರೆಸ್ ನಾಯಕರಿಗೆ ಹೈಕಮಾಂಡ್ ನಾಯಕರು ಸಭೆ ಆಯೋಜನೆ ಮಾಡಿದ್ದಾರೆ.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ,ರಾಹುಲ್ ಗಾಂಧಿ ನೇತೃತ್ವದಲ್ಲಿ ಸಭೆ ನಡೆಯಲಿದೆ.ಈ ಹಿನ್ನಲೆ ರಾಜ್ಯ ನಾಯಕರಿಗೆ ಆಹ್ವಾನ ನೀಡಿದ್ದಾರೆ.ಸಿಎಂ,ಡಿಸಿಎಂ ಸೇರಿದಂತೆ ಒಟ್ಟು 37 ನಾಯಕರಿಗೆ ಆಹ್ವಾನ ನೀಡಿದ್ದಾರೆ ಅಗಸ್ಟ್ 1 ರಂದು, ಸಂಜೆ ರಾಜ್ಯ ನಾಯಕರು ದೆಹಲಿಗೆ ಹೋಗುವ ಸಾಧ್ಯತೆ ಇದೆ.

ಕಾಂಗ್ರೆಸ್‌ ಸರ್ಕಾರದಲ್ಲಿ ಅಸಮಧಾನ ಸ್ಪೋಟ ಗೊಂಡಿದೆ.ಸಚಿವರ ವಿರುದ್ಧ ಪಕ್ಷದ ಹಲವು ಶಾಸಕರು ದೂರುಗಳ ಸುರಿಮಳೆಯೇ ಸುರಿದಿದ್ದಾರೆ.ಶಾಸಕರ ಅಸಮಧಾನ,ಆರೋಪ,ಪ್ರತ್ಯಾರೋಪಗಳನ್ನ ಸಿಎಲ್ಪಿ ಸಭೆಯಲ್ಲಿ ಚರ್ಚಿಸಲಾಗಿದೆ.ಈ ಸಭೆಯಲ್ಲಿ ಹಲವು ಸಚಿವರ ಮೇಲೆ ಶಾಸಕರು ಗಂಭೀರ ಆರೋಪವನ್ನ ಮಾಡಿದ್ದಾರೆ.ಕೆಲವರು ಸಿಎಂ ಸಿದ್ದರಾಮಯ್ಯ ಮೇಲೆಯು ಮುನಿಸಿಕೊಂಡಿದ್ದಾರೆ.ಈ ಹಿನ್ನಲೆ ಶಂಖ ದಿಂದಲೇ ತೀರ್ಥ ಕೊಟ್ಟರೆ ತೀರ್ಥ ಎಂಬ ನುಡಿ ಅಂತೆ ಹೈಕಮಾಂಡ್ ನಾಯಕರಿಂದಲೇ ಸಚಿವರಿಗೆ ವಾರ್ನಿಂಗ್ ಕೊಡಿಸಲು ಸಿಎಂ ಸಿದ್ದರಾಮಯ್ಯ ಸಜ್ಜಾಗಿದ್ದಾರೆ.ಈ ಹಿನ್ನಲೆ ಸರ್ಕಾರದ ಹಲವು ಸಚಿವರನ್ನ ಕೈ ಹೈಕಮಾಂಡ್ ಸಭೆಗೆ ಆಹ್ವಾನಿಸಿದೆ.
 
ದೆಹಲಿಯ ಸಭೆಯ ವಿಚಾರವಾಗಿ ಮಾತನಾಡಿದ ಡಿಸಿಎಂ ಡಿಕೆಶಿವಕುಮಾರ್ ಹಿಂದೆ ರಾಹುಲ್ ಗಾಂಧಿ ಬಂದಾಗ ಸಭೆ ನಿರ್ಧಾರ ಆಗಿತ್ತು. ಒಮ್ಮನ್ ಚಾಂಡಿ ನಿಧನ ಹಿನ್ನೆಲೆ ಎಲ್ಲಾ ಕ್ಯಾನ್ಸಲ್ ಆಗಿತ್ತು. ಕ್ಯಾಂಡಿಡೇಟ್ ಗಳ ಆಯ್ಕೆ ಸಂಬಂಧ ಚರ್ಚೆ ಮಾಡಲಿದ್ದೇವೆ. ನಾಲ್ಕು ಗ್ಯಾರಂಟಿಗಳನ್ನ ಈಗಾಗಲೇ ಜಾರಿಗೆ ಕ್ರಮ ಆಗಿದೆ.ಸಲಹೆಗಳನ್ನು ಕೇಳುತ್ತೇವೆ, ಎರಡು ಮೂರು ಸಭೆ ಇದೆ. ಸಭೆಯಲ್ಲಿ ಚರ್ಚೆ ಮಾಡಲಿದ್ದೇವೆ ಎಂದು ಹೇಳಿದರು.

ಇನ್ನೂ  ಈ ಸಭೆಯಲ್ಲಿ ಲೋಕಸಭಾ ಚುನಾವಣೆಯ ಸಿದ್ಧತೆಗಳು ಹಾಗೂ ಹಲವು ನಾಯಕರಿಗೆ ಟಾಸ್ಕ್ ಗಳನ್ನ ಹೈಕಮಾಂಡ್ ನಾಯಕರು ನೀಡಲಿದ್ದಾರೆ.ರಾಜ್ಯದಲ್ಲಿ ಕನಿಷ್ಠ 20 ಸ್ಥಾನವನ್ನ ಗೆಲ್ಲಲೇಬೇಕು ಎಂದು ಟಾಸ್ಕ್ ಕೊಡುವ ಸಾಧ್ಯೆತೆ ಇದೆ.ಇನ್ನೂ ಪರಿಷತ್ ವಿಪಕ್ಷ ನಾಯಕರಾಗಿ ಕಾರ್ಯನಿರ್ವಹಿಸಿದ ಬಿಕೆ ಹರಿಪ್ರಸಾದ್ ಅವರನ್ನ ಸಮಾಧಾನ ಪಡಿಸುವ ಕೆಲಸ ಆಗಲಿದೆ.ಸಿಎಂ ಸಿದ್ದರಾಮಯ್ಯ ವಿರುದ್ಧ ಕಾರ್ಯಕ್ರಮ ಒಂದರಲ್ಲಿ ಅಸಮಧಾನ ಹೊರ ಹಾಕಿದ್ರು.ಇದು ಕಾಂಗ್ರೆಸ್ ಪಕ್ಷಕ್ಕೆ ಸರ್ಕಾರಕ್ಕೆ ಮುಜಗರ ಉಂಟಾಗಿತ್ತು.ಈ ಹಿನ್ನಲೆ ಸಚಿವ ಸ್ಥಾನದ ಆಕಾಂಕ್ಷೀ ಆಗಿರುವ ಹರಿಪ್ರಸಾದ್ ಗೆ ಪಕ್ಷದ ಮತ್ತೊಂದು ಹುದ್ದೆ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ.ಇನ್ನೂ ಈ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷರ ಸ್ಥಾನಗಳು ಬದಲಾವಣೆ ಆಗುವ ಸಾಧ್ಯತೆಗಳು ಇವೆ ಈ ನಿಟ್ಟಿನಲ್ಲಿ ಹರಿಪ್ರಸಾದ್ ಗೆ ಕಾರ್ಯಧ್ಯಕ್ಷ ಸ್ಥಾನ ಕೊಡಲು ಚರ್ಚೆ ಆಗುತ್ತಿವೆ ಎಂದು ಮೂಲಗಳು ತಿಳಿಸಿವೆ
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ