ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಸ್ಪೋಟವಾಗಿರೋ ಆಂತರಿಕ ಕಲಹಕ್ಕೆ ಬ್ರೇಕ್ ಹಾಕಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ..ಸರ್ಕಾರ ಬಂದ ಎರಡೇ ತಿಂಗಳಿಗೆ,ಸಚಿವರ ವಿರುದ್ಧ ೩೦ಕ್ಕೂ ಹೆಚ್ಚು ಶಾಸಕರು ಬಹಿರಂಗ ಪತ್ರ ಸಮರ ಸಾರಿದ್ದು ದೊಡ್ಡ ಇರಿಸು-ಮುರಿಸಿಗೆ ಕಾರಣವಾಗಿದೆ.. ಎಚ್ಚೆತ್ತಗೊಂಡಿರುವ ಕಾಂಗ್ರೆಸ್ ಹೈಕಮಾಂಡ್ ಅಸಮಾಧಾನ ಶಮನಕ್ಕೆ ಹೊರಟಿದೆ..ಆಗಸ್ಟ್ ೨ ರಂದು ದೆಹಲಿಗೆ ಬರುವಂತೆ ಸಿಎಂ,ಸಚಿವರಿಗೆ ಬುಲಾವ್ ನೀಡಿದೆ.
ಕಾಂಗ್ರೆಸ್ ಶಾಸಕರ ಪತ್ರ ಸಮರ ಸಿದ್ದು ಸರ್ಕಾರಕ್ಕೆ ತೀವ್ರ ಮುಜುಗರ ತಂದಿದೆ..ಪ್ರತಿಪಕ್ಷ ಬಿಜೆಪಿ ಇದನ್ನೇ ಪ್ರಬಲ ಅಸ್ತ್ರ ಮಾಡಿಕೊಂಡು ಸರ್ಕಾರದ ವಿರುದ್ಧ ಭ್ರಷ್ಟಚಾರದ ಬಾಂಬ್ ಹಾಕಿದೆ..ಜೊತೆಗೆ ಸಿಂಗಪುರ ಆಪರೇಷನ್ ಆತಂಕವೂ ಶುರುವಾಗಿದೆ..ಸಿಎಂ ಸಿದ್ರಾಮಯ್ಯ ಶಾಸಕಾಂಗ ಪಕ್ಷದ ಸಭೆ ಕರೆದು ಶಾಸಕರನ್ನ ಮನವೊಲಿಸಿಯಾಗಿದೆ..ಆದ್ರೆ ಮುಂದೆ ಇದು ವಿಕೋಪಕ್ಕೆ ಹೋಗಬಹುದೆಂಬ ಕಾರಣಕ್ಕೆ ಸ್ವತಃ ಹೈಕಮಾಂಡ್ ಸಮಸ್ಯೆ ಪರಿಹಾರಕ್ಕೆ ಮುಂದಾಗಿದೆ..ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿಯವರೇ ಪಕ್ಷದ ಹಿರಿಯರಿಗೆ ಬುಲಾವ್ ನೀಡಿದ್ದಾರೆ..ಆಗಸ್ಟ್ ೨ ರಂದು ದೆಹಲಿಯಲ್ಲಿ ಸಭೆ ನಡೆಸಲಿದ್ದಾರೆ..ಶಾಸಕರ ಅಸಮಾಧಾನಕ್ಕೆ ಕಾರಣವಾದ ಸಚಿವರಿಗೆ ಎಚ್ಚರಿಕೆ ರವಾನಿಸಲಿದ್ದಾರೆ..ಇದೇ ವೇಳೆ ಲೋಕಸಭಾ ಚುನಾವಣೆ ಸಿದ್ಧತೆಯ ಬಗ್ಗೆಯೂ ಹಿರಿಯ ನಾಯಕರಿಗೆ ಜವಾಬ್ದಾರಿ ವಹಿಸಲಿದ್ದಾರೆ.
ನ್ನು ತಮ್ಮ ಸಮುದಾಯದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ನೇರವಾಗಿ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಸಮರ ಸಾರಿದ್ದರು..ಇದು ಪಕ್ಷಕ್ಕೂ ದೊಡ್ಡ ಡ್ಯಾಮೇಜ್ ಮಾಡಿತ್ತು..ತದ ನಂತರ ಹರಿಪ್ರಸಾದ್ ಮನವೊಲಿಸುವ ಪ್ರಯತ್ನಗಳು ನಡೆದಿತ್ತು..ಆದ್ರೆ ಹರಿಪ್ರಸಾದ್ ಇನ್ನೂ ಒಳಗೊಳಗೆ ಅಸಮಾಧಾನಗೊಂಡಿದ್ದಾರೆ..ಹಾಗಾಗಿ ಬಿ.ಕೆ.ಹರಿಪ್ರಸಾದ್ ಅವರನ್ನೂ ದೆಹಲಿಗೆಬರುವಂತೆ ಬುಲಾವ್ ನೀಡಲಾಗಿದೆ..ಅವರಿಗೆ ಪಕ್ಷದಲ್ಲಿ ಉನ್ನತ ಸ್ಥಾನಮಾನ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ..ಇನ್ನು ಸರ್ಕಾರ ಹಾಗೂ ಶಾಸಕರ ಮಧ್ಯೆ ಇರುವ ಅಸಮಾಧಾನ ಶಮನಕ್ಕೆ ಸಮನ್ವಯ ಸಮಿತಿ ರಚನೆಗೆ ಬೇಡಿಕೆ ಇದೆ..ಇದ್ರ ಬಗ್ಗೆಯೂ ಎಐಸಿಸಿ ಕ್ರಮ ಜರುಗಿಸುವ ಸಾಧ್ಯತೆಯಿದೆ.