ದಿನೇ ದಿನೇ ಕರುನಾಡ ಚುನಾವಣಾ ಕಣ ರಂಗೇರುತ್ತಿದ್ದು, ಲಿಂಗಾಯತರನ್ನ ಮತ್ತೆ ಸಿಎಂ ಮಾಡಬೇಕು ಅನ್ನೊ ವಿಚಾರಕ್ಕೆ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪ್ರತಿಯೊಂದು ಸಮುದಾಯಗಳಿಂದಲೂ ಸಿಎಂ ಆಗಬೇಕು ಅನ್ನೊ ಅಪೇಕ್ಷೆ ಇದೆ. ಬಿಜೆಪಿಯಲ್ಲಿ ಶಾಸಕನಾದ ಮೇಲೆ ಯಾವುದೇ ಜಾತಿ ಬಗ್ಗೆ ಚರ್ಚೆ ಮಾಡಲ್ಲ. ಅವಕಾಶ ಕೊಡಬೇಕು ಅನ್ನೋದು ಬಂದಾಗ ಪಕ್ಷ ತೀರ್ಮಾನ ಮಾಡುತ್ತದೆ ಎಂದು ತಿಳಿಸಿದ್ರು. ರಾಜ್ಯದಲ್ಲಿ ವಿಶೇಷವಾಗಿ ವೀರಶೈವ ಸಮಾಜದವರು ಹೆಚ್ಚಾಗಿದ್ದು, ತಮ್ಮನ್ನು ತಾವು ಬಿಜೆಪಿಯಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ. ಎಲ್ಲಾ ಸಮುದಾಯಗಳಿಗೂ ಟಿಕೆಟ್ ಹಂಚಲಾಗಿದ್ದು, ಎಲ್ಲಾ ಸಮುದಾಯಗಳಿಂದಲೂ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ರಾಜ್ಯದಲ್ಲಿ ಎಲ್ಲಾ ಬಿಜೆಪಿ ಕಾರ್ಯಕರ್ತರು ತಮ್ಮನ್ನ ತಾವು ಉತ್ಸುಕರಾಗಿ ತೊಡಗಿಸಿಕೊಳ್ಳಬೇಕು. ಮತ್ತೊಮ್ಮೆ ಡಬಲ್ ಇಂಜಿನ್ ಸರ್ಕಾರ ರಚನೆ ಮಾಡಬೇಕು. ಕಾಂಗ್ರೆಸ್ ಕೆಲವು ಸ್ಟೇಟ್ಮೆಂಟ್ ಕೊಟ್ಟು, ದಿಕ್ಕು ತಪ್ಪಿಸುವ ಕೆಲಸ ಮಾಡ್ತಿದ್ದಾರೆ ಎಂದು ಕಿಡಿಕಾರಿದ್ರು.