ಕಾಂಗ್ರೆಸ್, ಜೆಡಿಎಸ್ ನಲ್ಲಿ ಗುಂಪುಗಾರಿಕೆ ಇದೆ - ಕೆ.ಎಸ್.ಈಶ್ವರಪ್ಪ

ಬುಧವಾರ, 26 ಡಿಸೆಂಬರ್ 2018 (10:35 IST)
ಬಾಗಲಕೋಟೆ : ರಮೇಶ್ ಜಾರಕಿಹೊಳಿ ಕೈ ಮುಖಂಡರಿಗೆ ಸಿಗದ ವಿಚಾರಕ್ಕೆ ಸಂಬಂಧಿಸಿದಂತೆ ಯಾಕೆ ಸಿಗುತ್ತಿಲ್ಲ ಎನ್ನುವ ಉತ್ತರ ನನ್ನ ಬಳಿಯಿಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.


ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಡ್ತೀನಿ ಎಂದು ಹೇಳಿದ್ದಾರೆ. ಮುಂದಿನ ವಿಚಾರ ಅವರಿಗೆ ಬಿಟ್ಟಿದ್ದು’ ಎಂದು ತಿಳಿಸಿದ್ದಾರೆ. ಹಾಗೇ ರಮೇಶ್ ಜಾರಕಿಹೊಳಿ ಬಿಜೆಪಿ ಸಂಪರ್ಕ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯದ ಜನತೆ ಬಿಜೆಪಿಗೆ ಪೂರ್ಣ ಬಹುಮತ ಕೊಟ್ಟಿಲ್ಲ. ವಿರೋಧಪಕ್ಷದಲ್ಲಿದ್ದು ನಮ್ಮ ಕೆಲಸ ಮಾಡ್ತೀನಿ. ಕಾಂಗ್ರೆಸ್, ಜೆಡಿಎಸ್ ನಲ್ಲಿ ಗುಂಪುಗಾರಿಕೆ ಇದೆ. ನಾಯಕತ್ವದ ಸ್ವಾರ್ಥ ನೋಡಿದ್ರೆ ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಇದೆ. ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ನಾಯಕತ್ವ ಗೊಂದಲವಿದೆ. ಈ ಅಸಮಾಧಾನ ರಾಜ್ಯ ರಾಜಕರಣಕ್ಕೂ ಗೊಂದಲವಾಗುತ್ತದೆ ಎಂದು ಹೇಳಿದ್ದಾರೆ.


ಜೆಡಿಎಸ್ ಮುಖಂಡ ಪ್ರಕಾಶ್ ಹತ್ಯೆಗೆ ಶೂಟೌಟ್ ಮಾಡಿ ಎಂದು ಸಿಎಂ ಹೇಳಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಹೇಳಿಕೆಗೆ ಸಿಎಂ ಹೌದೋ ಅಲ್ಲವೋ ಎನ್ನುವ ಸಂಶಯ ಇದೆ. ಶೂಟೌಟ್ ಮಾಡಿದವರನ್ನು ಹಿಡಿಯಿರಿ ಎನ್ನಬೇಕು. ಯಾರೋ ಒಬ್ಬರು ಗೂಂಡಾ ಲೀಡರ್ ಹೇಳಿರುವಂತೆ ಸಿಎಂ ಹೇಳಿದ್ದಾರೆ ಎಂದು ಅವರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ