ವೀಣಾ ಅಚ್ಚಯ್ಯ ಸಹೋದರಿ ಎಂದು ಕೈ ಮುಟ್ಟಿದ್ದೇನೆ: ಕಾಂಗ್ರೆಸ್ ಮುಖಂಡ

ಶುಕ್ರವಾರ, 18 ಆಗಸ್ಟ್ 2017 (17:04 IST)
ಕಾಂಗ್ರೆಸ್ ಪಕ್ಷಕ್ಕೆ ಮುಜುಗುರವಾಗುವ ಘಟನೆಯೊಂದರಲ್ಲಿ, ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಹಿರಿಯ ಕಾಂಗ್ರೆಸ್ ಮುಖಂಡನೊಬ್ಬ, ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವುದು ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ. 
ಮಡಿಕೇರಿ ಕಾಂಗ್ರೆಸ್ ಘಟಕದ ಮಾಜಿ ಅಧ್ಯಕ್ಷ ಮತ್ತು ಸಿಲ್ಕ್ ಬೋರ್ಡ್ ಪ್ರಸಕ್ತ ಅಧ್ಯಕ್ಷ ಟಿ.ಪಿ. ರಮೇಶ್, ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಕೈಯನ್ನು ಸಾರ್ವಜನಿಕರ ಸಮ್ಮುಖದಲ್ಲಿಯೇ ಹಿಡಿದಿರುವುದು ವಿವಾದಕ್ಕೆ ಕಾರಣವಾಗಿದೆ. 
 
ವೀಡಿಯೊದಲ್ಲಿ, ಕಾಂಗ್ರೆಸ್ ಎಂಎಲ್ಸಿ ವೀಣಾ ತನ್ನ ಕೈಯನ್ನು ಮುಂದೂಡುತ್ತಿರುವಂತೆ ರಮೇಶ್ ಲಘುವಾಗಿ ನಗುತ್ತಿರುವುದು  ಕ್ಯಾಮರಾದಲ್ಲಿ ಸೆರೆಯಾಗಿದೆ.
 
ಸಿಎಂ ಸಿದ್ದರಾಮಯ್ಯರ ಆಪ್ತ ವಲಯದಲ್ಲಿ ಸ್ಥಾನ ಪಡೆದಿರುವ ರಮೇಶ್, ವರದಿಗಳನ್ನು ತಳ್ಳಿಹಾಕಿದ್ದು, ಇವೆಲ್ಲಾ ಆಧಾರರಹಿತ. ವೀಣಾ ಅಚ್ಚಯ್ಯ ನನ್ನ ಸಹೋದರಿಯಿದ್ದಂತೆ. ರಾಜಕೀಯವಾಗಿ ಮಸಿ ಬಳೆಯಲು ಇಂತಹ ಸಂಚು ರೂಪಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. 
 
ಇದೇ ವೇಳೆ, ರಮೇಶ್ ವಿರುದ್ಧ ಆರೋಪ ಸಾಬೀತಾದಲ್ಲಿ  ಕ್ರಮ ಕೈಗೊಳ್ಳಲಾಗುವುದು ಎಂದು ಕಾಂಗ್ರೆಸ್ ಮುಖಂಡರು ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ