ಹುಬ್ಬಳ್ಳಿಯಲ್ಲಿ ಬೀಡು ಬಿಟ್ಟಿರುವ ರಾಜ್ಯ ಕಾಂಗ್ರೆಸ್ ನಾಯಕರಿಗೆ ತಿಂಡಿ ತಿನ್ನಲೂ ಪುರುಸೊತ್ತಿಲ್ಲ!
ಈ ನಾಯಕರು ಇಲ್ಲಿ ತಂಗಿರುವ ಸುದ್ದಿ ತಿಳಿಯುತ್ತಿದ್ದಂತೇ ಹೋಟೆಲ್ ಗೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ದಂಡೇ ಆಗಮಿಸುತ್ತಿದೆ. ಇದರಿಂದಾಗಿ ಪರಮೇಶ್ವರ್ ಸೇರಿದಂತೆ ಇತರ ನಾಯಕರು ಫುಲ್ ಬ್ಯುಸಿಯಾಗಿದ್ದಾರೆ.
ರಾಹುಲ್ ಈ ಬಾರಿ ರಾಜ್ಯಕ್ಕೆ ಆಗಮಿಸಿದ ವೇಳೆ ಟಿಕೆಟ್ ಹಂಚಿಕೆ ವಿಚಾರ ಫೈನಲ್ ಮಾಡಲಿದ್ದಾರೆ. ಇದಕ್ಕೆ ಈಗಾಗಲೇ ಪರಮೇಶ್ವರ್, ಕೆಸಿ ವೇಣುಗೋಪಾಲ್ ಅಂತಿಮ ಹಂತದ ತಯಾರಿ ನಡೆಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಟಿಕೆಟ್ ಗಾಗಿ ಲಾಬಿ ನಡೆಸಲು ನಾಯಕರ ದಂಡೇ ಹೋಟೆಲ್ ಗೆ ಹರಿದುಬರುತ್ತಿದೆ.