ಹೈಕಮಾಂಡ್ ಗೆ ಷರತ್ತು ಹಾಕಿದ್ದಕ್ಕೆ ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್ ನಾಯಕರು ಆಕ್ರೋಶ
ಮಂಗಳವಾರ, 28 ಜನವರಿ 2020 (10:44 IST)
ಬೆಂಗಳೂರು : ಸಿಎಲ್ ಪಿ ನಾಯಕ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಗೊಂದಲ ವಿಚಾರಕ್ಕೆ ಸಂಬಂಧಿಸಿದಂತೆ ಹೈಕಮಾಂಡ್ ಗೆ ಸಿದ್ದರಾಮಯ್ಯ ಷರತ್ತು ಹಾಕಿದ್ದಕ್ಕೆ ಅವರ ವಿರುದ್ಧ ಕೆಲವು ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೀವು ಹಾಕಿರುವ ಷರತ್ತುಗಳಿಂದ ಸಮಸ್ಯೆಗಳು ಬಗೆಹರಿಯುತ್ತಿಲ್ಲ. ಕಾಂಗ್ರೆಸ್ ಪಕ್ಷದಲ್ಲಿರುವಂತಹ ಸಮಸ್ಯೆಗಳು ಬಗೆಹರಿಯುತ್ತಿಲ್ಲ. ನಿಮ್ಮನ್ನ ಹೊರಗಿನವರಂತೆ ಪಕ್ಷದಲ್ಲಿರುವವರು ನೋಡಿಲ್ಲ. ಹೀಗಾಗಿ ನೀವೂ ಸಹ ಒಂದಿಷ್ಟು ರಾಜಿ ಮಾಡಿಕೊಳ್ಳಬೇಕು. ನಿಮ್ಮ ಷರತ್ತುಗಳನ್ನು ವಾಪಸ್ ಪಡೆದುಕೊಳ್ಳಿ ಎಂದು ಕೆಲವು ಸಿದ್ದರಾಯ್ಯರನ್ನು ಭೇಟಿ ಮಾಡಿ ಸಲಹೆ.
ಇದಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸಹಮತ ನೀಡಿದ್ದು, ಮಲ್ಲಿಕಾರ್ಜುನ ಖರ್ಗೆ ಮುಂದಾಳತ್ವ ವಹಿಸಿದ್ರೆ ಮೂಲ ಕಾಂಗ್ರೆಸ್ ನಾಯಕರ ಜೊತೆ ಚರ್ಚೆಗೆ ಸಿದ್ದ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಹೈಕಮಾಂಡ್ ಭೇಟಿಗೂ ಮೊದಲು ಖರ್ಗೆ ಜೊತೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.