ಡಿಕೆಶಿ ಮನೆ ಮೇಲಿನ ಐಟಿ ರಾಜಕೀಯಪ್ರೇರಿತವಾಗಿದೆ: ಕಾಂಗ್ರೆಸ್ ನಾಯಕರ ಕಿಡಿ

ಬುಧವಾರ, 2 ಆಗಸ್ಟ್ 2017 (11:10 IST)
ರಾಜ್ಯಸಭಾ ಚುನಾವಣೆ ದೃಷ್ಟಿಯಿಂದ ಕೇಂದ್ರ ಸರ್ಕಾರ ರಾಜಕೀಯ ಪ್ರೇರಿತವಾಗಿ ಸಚಿವ ಡಿ.ಕೆ. ಶಿವಕುಮಾರ್ ಮನೆ ಮೇಲೆ ಐಟಿ ದಾಳಿ ನಡೆಸಿದೆ ಎಂದು ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಕೇಂದ್ರ ಸರ್ಕಾರ ಇನ್ನಿಲ್ಲದಂತೆ ಅಕ್ರಮ ನಡೆಸುತ್ತಿದೆ. ಆಡಳಿತ ಯಂತ್ರವನ್ನ ದುರುಪಯೋಗಪಡಿಸಿಕೊಳ್ಳುತ್ತಿದೆ. ಸಚಿವ ಡಿ.ಕೆ. ಶಿವಕುಮಾರ್ ನಿವಾಸಗಳ ಮೇಲಿನ ದಾಳಿ ಹಿಂದೆ ಕೇಂದ್ರ ಸರ್ಕಾರ ಹತಾಶೆ ಕೃತ್ಯ ಎಂದು ಸೋನಿಯಾ ಗಾಂಧಿ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಟ್ವೀಟ್ ಮಾಡಿದ್ದಾರೆ.

ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಸಹ ಐಟಿ ದಾಳಿಯನ್ನ ಖಂಡಿಸಿದ್ದಾರೆ. ಇದು ರಾಜಕೀಯ ದುರುದ್ದೇಶದ ದಾಳಿ, ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಪಕ್ಷದ ಪರ ಕೆಲಸ ಮಾಡುತ್ತಿರುವುದಕ್ಕೆ ಈ ದಾಳಿ ನಡೆಸಲಾಗಿದೆ. ಪಕ್ಷದ ಭಿವೃದ್ಧಿ ಹತ್ತಿಕ್ಕುವ ಯತ್ನ ಎಂದು ಆರೋಪಿಸಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ದಾಳಿಯನ್ನ ಖಂಡಿಸಿದ್ದಾರೆ.

ದೇವರ ಮಗನೆಂದು ಹೇಳಲು ಹೊರಟಿರುವ ಪ್ರಧಾನಮಂತ್ರಿ ನಿದರಿಂದ ವರೇಂದ್ರಮೋದಿಯವರ ಸಣ್ಣತನ ಇದಿದರಿಂದ ಬಯಲಾಗಿದೆ. ಐಟಿ ದಾಳಿ ನಡೆಸಿರುವ ಸಂದರ್ಭ ರಾಜಕೀಯ ಪ್ರೇರಿತವಾದದ್ದು. ನರೇಂದ್ರಮೋದಿಗೆ ಇದು ಗೌರವ ತರುವುದಿಲ್ಲ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಕಿಡಿ ಕಾರಿದ್ದಾರೆ,

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ