ಬೆಂಗಳೂರಿನ ಎಲ್ಲಾ ಪಧಾದಿಕಾರಿಗಳು,ಮಾಜಿ ಕಾರ್ಪೊರೇಟರ್ ಗಳ ಸಭೆ ಕಾಂಗ್ರೆಸ್ ಮಂಡಿಸಿದೆ.ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಸಭೆ ನಡೆಸಿದ್ದು, ಬಿಜೆಪಿ ಭದ್ರ ಕೋಟೆಯಲ್ಲಿ ಗೆಲ್ಲುವ ರಣತಂತ್ರದ ಬಗ್ಗೆ ಚರ್ಚೆ ನಡೆಸಲಾಗಿದೆ.ಬಿಜೆಪಿ ಭದ್ರ ಕೋಟೆಯಲ್ಲಿನ ಕಾರ್ಯಕರ್ತರು ಅಳಲು ತೋಡಿಕೊಂಡಿದ್ದು,ಎಷ್ಟೋ ವರ್ಷಗಳಕಾಲ ಪಕ್ಷಕ್ಕಾಗಿ ದುಡಿದಿದ್ದೇವೆ .ಲೆಕ್ಕವಿಲ್ಲದಷ್ಟು ಖರ್ಚು ಮಾಡಿದ್ದೇವೆ .ಸರ್ಕಾರ ನಮ್ಮದು ಇದ್ರು ನಮ್ಮ ಕ್ಷೇತ್ರಗಳಲ್ಲಿ ನಮ್ಮ ಕೆಲಸಗಳು ಆಗ್ತಾಯಿಲ್ಲ ಎಂದು ಆರ್ಥಿಕವಾಗಿ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.
ಕಾರ್ಯಕರ್ತರ ಮನವಿಗೆ ರಾಮಲಿಂಗಾರೆಡ್ಡಿ ಸ್ಪಂದಿಸಿದ್ದು,ಹಲವು ಬಾರಿ ಸ್ಪರ್ಧಿಸಿದಂತ ಅಭ್ಯರ್ಥಿಗಳಿಗೆ ಈ ಭಾರಿ ಆರ್ಥಿಕವಾಗಿ ಸಹಾಯ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.ವಾರ್ಡ್ ವಿಂಗಡನೆಯಲ್ಲಿ ಬಿಜೆಪಿ ಕಾಂಗ್ರೆಸ್ ಮತಗಳನ್ನ ಬೇರೆ ಬೇರೆ ಕಡೆ ಹೋಗುವ ಹಾಗೆ ಮಾಡಿದ್ದಾರೆ.ಈ ಹಿನ್ನೆಲೆ ಬಿಜೆಪಿ ಭಧ್ರ ಕೋಟೆಯಲ್ಲಿ ವಾರ್ಡ್ ವಿಂಗಡನೆ ವೇಳೆ ಸರಿಯಾಗಿ ಆಟ ಆಡಬೇಕು ಎಂದು ಪ್ಲಾನ್ ಮಾಡಿದ್ದು,ಬಿಜೆಪಿ ಮತಗಳನ್ನ ವಿಭಜನೆ ಮಾಡುವಂತ ರಣತಂತ್ರ ರೂಪಿಸಬೇಕು ಎಂದು ಚರ್ಚಿಸಲಾಗುತ್ತೆ.ಹೀಗಾಗಿ ಇಂದು ಕೆಪಿಸಿಸಿ ಕಚೇರಿಯಲ್ಲಿ ಚುನಾವಣೆಯ ಕುರಿತು ಮಹತ್ವದ ಸಭೆ ನಡೆಸಲಾಗುತ್ತೆ.