ಸರ್ಕಾರದ ವಿರುದ್ದ ಆಟೋ ಚಾಲಕರ ಆಕ್ರೋಶ; ಜುಲೈ 28ಕ್ಕೆ ರಾಜ್ಯಾದ್ಯಂತ ಸೇವೆ ಬಂದ್?

ಗುರುವಾರ, 13 ಜುಲೈ 2023 (15:58 IST)
ಸರ್ಕಾರದ ವಿರುದ್ದ ಆಟೋ ಚಾಲಕರು ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ.ಖಾಸಗಿ ಬಸ್ ಒಕ್ಕೂಟ, ಟೂರ್ಸ್ ಅಂಡ್ ಟ್ರಾವೆಲ್ ಸೇರಿದಂತೆ 21 ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗಿಯಾಗಲ್ಲಿದ್ದಾರೆ.ಶಕ್ತಿ ಯೋಜನೆಯಿಂದಾಗಿ ಲಾಸ್ ನಲ್ಲಿದ್ದ ಆಟೋ ಚಾಲಕರಿಗೆ ಗಾಯದ ಮೇಲೆ ರ್ಯಾಪಿಡೋದಂತಾ ಬೈಕ್ ಟ್ಯಾಕ್ಸಿಗಳು ಬರೆ ಎಳೆಯುತ್ತಿದೆ.
 
ಸರ್ಕಾರ ಆಟೋ ಚಾಲಕರ ನೆರವಿಗೆ ಬರುವಂತೆ ಒತ್ತಾಯಿಸಿ,ತಮ್ಮ ಬೇಡಿಕೆಗಳ ಈಡೇರಿಕೆಗೆ ಸರ್ಕಾರಕ್ಕೆ ಒಂದು ವಾರದ ಗಡುವು ನೀಡಿದ್ದಾರೆ.ಇಲ್ಲವಾದ್ರೆ ಜುಲೈ 28 ರಂದು ಸಂಪೂರ್ಣ ಆಟೋ ಸಂಚಾರ ಬಂದ್‌ ಮಾಡೋ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.ರಾಜ್ಯಾದ್ಯಂತ ಇರುವ 3.10 ಲಕ್ಷ ಹಾಗೂ ಬೆಂಗಳೂರಲ್ಲಿ ಇರುವ 2.10 ಲಕ್ಷ ಆಟೋಗಳು ಈ ಮುಷ್ಕರದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ.
 
ಆಟೋ ಚಾಲಕರ ಬೇಡಿಕೆಗಳನ್ನು ನೋಡೋದಾದ್ರೆ
 
*ರ್ಯಾಪಿಡೋ ಬೈಕ್ ಟ್ಯಾಕ್ಸಿಗಳನ್ನ ನಿಷೇಧಿಸಬೇಕು,
 
*ಆಟೋ ಚಾಲಕರಿಗೆ ಪ್ರತಿ ತಿಂಗಳು 10 ಸಾವಿರ ಪರಿಹಾರ ಧನ ನೀಡಬೇಕು
 
*ಅಸಂಘಟಿತ ವಾಣಿಜ್ಯ ಚಾಲಕರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು, 
 
*ಆಟೋ ಟ್ಯಾಕ್ಸಿ ಚಾಲಕರಿಗೆ ಎರಡು ಲಕ್ಷ ಸಾಲ ಸೌಲಭ್ಯ ನೀಡಬೇಕು  
 
*ಎಲೆಕ್ಟ್ರಿಕ್ ಆಟೋಗಳನ್ನ ರ್ಯಾಪಿಡೊ, ಓಲಾ, ಊಬರ್ ಕಂಪನಿಗೆ ನೊಂದಣಿ ಮಾಡುವುದನ್ನ ನಿಲ್ಲಿಸಬೇಕು
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ