ಸಭಾಪತಿ ವಿವಾದ: ಸಿದ್ದರಾಮಯ್ಯ ಬಳಿ ದೂರಿಕೊಂಡ ಕಾಂಗ್ರೆಸ್ ಶಾಸಕರು
ವಿಧಾನಪರಿಷತ್ ನಲ್ಲಿ ಕಾಂಗ್ರೆಸ್ ಗೆ ಬಹುಮತವಿದೆ. ಹೀಗಿದ್ದಾಗ ಜೆಡಿಎಸ್ ಗೆ ಸ್ಪೀಕರ್ ಸ್ಥಾನ ಬಿಟ್ಟುಕೊಡುವುದರ ಬಗ್ಗೆ ಕಾಂಗ್ರೆಸ್ ನಾಯಕರಲ್ಲಿ ಅಸಮಾಧಾನವಿದೆ. ಸ್ವತಃ ಡಿಸಿಎಂ ಪರಮೇಶ್ವರ್ ಜೆಡಿಎಸ್ ಗೆ ಸ್ಥಾನ ಬಿಟ್ಟುಕೊಡಲು ಮನಸ್ಸು ಮಾಡಿರುವುದು ಕಾಂಗ್ರೆಸ್ ಶಾಸಕರ ಅಸಮಾಧಾನ ಹೆಚ್ಚಿಸಿದೆ.
ಸ್ಪೀಕರ್ ಸ್ಥಾನ ಜೆಡಿಎಸ್ ಗೆ ಬಿಟ್ಟುಕೊಟ್ಟು, ಮುಖ್ಯ ಸಚೇತಕ ಸ್ಥಾನವನ್ನು ತಮ್ಮ ಆಪ್ತ ರಘು ಚೇತನ್ ಗೆ ವಹಿಸಲು ಪರಮೇಶ್ವರ್ ಮುಂದಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಇದೀಗ ಕಾಂಗ್ರೆಸ್ ನಾಯಕರು ಅಸಮಾಧಾನ ಹೊರ ಹಾಕಿದ್ದಾರೆ. ಇದೇ ಕಾರಣಕ್ಕೆ ಸ್ಪೀಕರ್ ಆಯ್ಕೆಯೂ ತಡವಾಗುತ್ತಿದೆ.