ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿಡಿಯೋಗೆ ಕಾಂಗ್ರೆಸ್ ಮುಖಂಡರು ಅಸಮಾಧಾನ

ಬುಧವಾರ, 26 ಫೆಬ್ರವರಿ 2020 (10:59 IST)
ಬಾಗಲಕೋಟೆ : ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿಡಿಯೋ ಒಂದಕ್ಕೆ ಸಂಬಂಧಪಟ್ಟಂತೆ  ಅವರ ವಿರುದ್ಧ  ಕಾಂಗ್ರೆಸ್ ಮುಖಂಡರು ಅಸಮಾಧಾನ ಹೊರಹಾಕಿದ್ದಾರೆ.


ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಈಗಿನ ಕಾಂಗ್ರೆಸ್ ತಿನ್ನುವ ಕಾಂಗ್ರೆಸ್ ಎಂದು ಕೈಸನ್ನೇ ಮಾಡಿದ  ವಿಡಿಯೋ ಇದೀಗ ವೈರಲ್ ಆಗಿದೆ. ಇದಕ್ಕೆ ಬಾಗಲಕೋಟೆ  ಕಾಂಗ್ರೆಸ್ ಜಿಲ್ಲಾಧ್ಯಕ್ಷ ನಂಜಯ್ಯನಮಠ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರಾಗಿ ಅವರು ಆ ರೀತಿ ಮಾಡಿರುವುದು ತಪ್ಪು, ಈ ಸಂಬಂಧ ನಾನು ಸಿದ್ದರಾಮಯ್ಯಗೆ ದೂರು ನೀಡುತ್ತೇನೆ ಕಿಡಿಕಾರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ