ಈ ಬಗ್ಗೆ ಮಾತನಾಡಿದ ಶರದ್ ಪವಾರ್, ಎನ್.ಪಿ.ಆರ್ ಬೆಂಬಲಿಸುವ ವಿಚಾರ ಸಂಬಂಧ ನಾನು ಉದ್ಧವ್ ಠಾಕ್ರೆ ಜೊತೆ ಮಾತನಾಡುತ್ತೇನೆ. ಶಿವಸೇನೆಯೊಂದಿಗೆ ಚರ್ಚಿಸಿ ಒಮ್ಮತಕ್ಕೆ ಬರುತ್ತೇವೆ, ಸದ್ಯ ಕಾಂಗ್ರೆಸ್ ಮತ್ತು ಎನ್.ಸಿ.ಪಿ ಸಿಎಎ ಮತ್ತು ಎನ್.ಪಿ.ಆರ್ ವಿರುದ್ಧ ನಿಲುವು ಹೊಂದಿರುವಾಗ ಹೀಗೆ ಮೈತ್ರಿ ನಾಯಕರು ಭಿನ್ನ ಹೇಳಿಕೆ ನೀಡಿರುವುದು ಮೈತ್ರಿ ಸರ್ಕಾರದಲ್ಲಿ ಭಿನ್ನ ಮತ ಭುಗಿಲೇಳುವ ಸಂಭವವಿದೆ ಎಂದು ಹೇಳಿದ್ದಾರೆ.