ಕಾಂಗ್ರೆಸ್ ಶಾಸಕ ಮುನಿರತ್ನ ವಿರುದ್ಧ ಕಾರ್ಪೋರೇಟರ್‌ ಮಂಜುಳಾರಿಂದ ಗುಂಡಾಗಿರಿ ಆರೋಪ

ಮಂಗಳವಾರ, 31 ಮೇ 2016 (19:30 IST)
ಶಾಸಕ ಮುನಿರತ್ನ  ಬೆಂಬಲಿಗರು ಗುಂಡಾಗಿರಿ ಮಾಡುತ್ತಿದ್ದಾರೆ ಎಂದು ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಜೆಡಿಎಸ್ ಕಾರ್ಪೋರೇಟರ್ ಮಂಜುಳಾ ನಾರಾಯಣ ಸ್ವಾಮಿ ಗಂಭೀರವಾಗಿ ಆರೋಪಿಸಿದ್ದಾರೆ.
 
ಬೆಂಗಳೂರಿನಲ್ಲಿ ಕಸ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ. ಕಸ ಸುರಿದ ಜಾಗದಲ್ಲೇ ಬೆಂಕಿ ಹಚ್ಚುತ್ತಿದ್ದಾರೆ. ಮುಂದಿನ ತಿಂಗಳ ಸಭೆಯ ಒಳಗೆ ಕಸ ವಿಲೇವಾರಿಯಾಗಬೇಕು. ಇಲ್ಲವಾದರೆ ಇದರ ವಿರುದ್ಧ ಉಗ್ರ ಹೋರಾಟ ಕೈಗೊಳ್ಳುತ್ತೇನೆ ಎಂದು ಶಾಸಕ ಮುನಿರತ್ನ ಬಿಬಿಎಂಪಿ ಕಾರ್ಯವೈಖರಿ ಕುರಿತು ಗರಂ ಆಗಿದ್ದರು. 
 
ವಾರ್ಡ್‌ಗಳಲ್ಲಿ ಫ್ಲೆಕ್ಸ್‌ಗಳ ಹಾವಳಿ ಹೆಚ್ಚಾಗಿದೆ. ಶಾಸಕ ಮುನಿರತ್ನ ಅವರ ಬೆಂಬಲಿಗರು ಗುಂಡಾಗಿರಿ ಮಾಡುತ್ತಿದ್ದಾರೆ. ಈ ಕುರಿತು ಮೇಯರ್ ಮತ್ತು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದೇನೆ. ಆದರೂ, ಅವರು ಯಾವ ರೀತಿಯ ಕ್ರಮವನ್ನು ಕೈಗೊಂಡಿಲ್ಲ. ಸರಕಾರದ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲು ಶಾಸಕರು ಅಡ್ಡಗಾಲು ಹಾಕುತ್ತಿದ್ದಾರೆ. ಕಾಮಗಾರಿ ನಡೆಯುವ ಸ್ಥಳಕ್ಕೆ ಶಾಸಕರ ಬೆಂಬಲಿಗರು ಬಂದು ಗುಂಡಾಗಿರಿ ಮಾಡುತ್ತಾರೆ. ನನ್ನ ವಾರ್ಡ್ ಜನರಿಗಾಗಿ ಜೀವ ಕೊಡಲು ಸಿದ್ದ ಎಂದು ಜೆಡಿಎಸ್ ಕಾರ್ಪೋರೇಟರ್ ಮಂಜುಳಾ ನಾರಾಯಣ ಸ್ವಾಮಿ ಘೋಷಿಸಿದ್ದಾರೆ.
 
ಶಾಸಕರ ಬೆಂಬಲಿಗರು ಕಸಕ್ಕೆ ಬೆಂಕಿ ಹಚ್ಚಿ ಅಗ್ನಿಶಾಮಕ ವಾಹನಕ್ಕೆ ಕರೆ ಮಾಡುತ್ತಾರೆ. ಆರೋಪಗಳನ್ನು ಬೇರೆಯವರ ಮೇಲೆ ಹಾಕುತ್ತಾರೆ. ಈ ಕುರಿತು ನಾವು ಸುಮ್ಮನಿರುವುದಿಲ್ಲ ಎಂದು ಕಾರ್ಪೋರೇಟರ್ ಮಂಜುಳಾ ನಾರಾಯಣ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ