ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ದಾಖಲೆಯನ್ನು ಮುರಿದು ಭಾರತದ ಎರಡನೇ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಪ್ರಧಾನಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.
ಜನವರಿ 24, 1966 ರಿಂದ ಮಾರ್ಚ್ 24, 1977 ರವರೆಗೆ ಇಂದಿರಾ ಗಾಂಧಿ ಅವರು 4,077 ದಿನಗಳ ಕಾಲ ಪ್ರಧಾನಿಯಾಗಿದ್ದರು. ಅವರು 1980 ರಲ್ಲಿ ಮರು ಆಯ್ಕೆಯಾದರು ಮತ್ತು 1984 ರಲ್ಲಿ ಅವರ ಮರಣದವರೆಗೂ ಸೇವೆ ಸಲ್ಲಿಸಿದರು.
2014, 2019 ಮತ್ತು 2024 ರಿಂದ ಸತತ ಮೂರು ಲೋಕಸಭಾ ಚುನಾವಣೆಗಳನ್ನು ಗೆದ್ದು ಪ್ರಧಾನ ಸ್ಥಾನದಲ್ಲಿ 4078ದಿನಗಳನ್ನು ಪೂರ್ಣಗೊಳಿಸಿದ್ದಾರೆ.
ಅಂದ ಹಾಗೆ ದೇಶದ ದೀರ್ಘಾವಧಿಯ ಪ್ರಧಾನಿ ಎಂಬ ದಾಖಲೆ, ದೇಶದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂ ಅವರ ಹೆಸರಲ್ಲಿದೆ. 1947ರ ಆಗಸ್ಟ್ 15ರಿಂದ 1964ರ ಮೇ 27ರ ವರೆಗೆ 16 ವರ್ಷ 286 ದಿನಗಳ ಕಾಲ ಜವಾಹರಲಾಲ್ ನೆಹರೂ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಿದ್ದರು.
ಸತತ ಮೂರನೇ ಬಾರಿ ಪ್ರಧಾನಿಯಾಗಿ ಆಯ್ಕೆಯಾಗುವ ಮೂಲಕ ಈಗಾಗಲೇ ನೆಹರೂ ದಾಖಲೆಯನ್ನು ಮೋದಿ ಸರಿಗಟ್ಟಿದ್ದರು.