ಕಾಂಗ್ರೆಸ್ ಪಕ್ಷಕ್ಕೆ ಹಿಂದೂ ದೇವಾಲಯಗಳೆಂದರೆ ಅದ್ಯಾಕಿಷ್ಟು ದ್ವೇಷ: ಆರ್‌.ಅಶೋಕ್

Sampriya

ಸೋಮವಾರ, 15 ಏಪ್ರಿಲ್ 2024 (15:05 IST)
Photo Courtesy X
ಚಿಕ್ಕಬಳ್ಳಾಪುರ: ಮುದ್ದೇನಹಳ್ಳಿ ಪಂಚಾಯಿತಿ ಗ್ರಂಥಾಲಯದಲ್ಲಿ ಹಿಂದೂ ವಿರೋಧಿ ವಿವಾದಾತ್ಮಕ ಗೋಡೆ  ಬರಹ ರಾಜ್ಯದಾದ್ಯಂತ ವಿವಾದಕ್ಕೆ ಕರಾಣವಾಗಿದ್ದು ವಿಪಕ್ಷ ನಾಯಕ ಆರ್.ಅಶೋಕ್ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಇಲ್ಲಿನ ಪಂಚಾಯಿತಿ ಗ್ರಂಥಾಲಯದಲ್ಲಿ 'ಒಂದು ಮಂದಿರ ಕಟ್ಟಿಸಿದರೆ ಸಾವಿರ ಭಕ್ತರು ಹುಟ್ಟಿಕೊಳ್ಳುತ್ತಾರೆ' ಎಂಬ ವಾಕ್ಯ ಬರೆದು ಹಿಂದೂ  ಧರ್ಮಕ್ಕೆ ಅವಮಾನ ಮಾಡಿದ ಬಗ್ಗೆ ವರದಿಯಾಗಿದೆ. ಈ ಗೋಡೆ ಬರಹವನ್ನು ಖಂಡಿಸಿ,  ಹಿಂದೂಗಳು ಆಕ್ರೋಶ ಹೊರಹಾಕುತ್ತಿದ್ದಾರೆ. ಅದಲ್ಲದೆ ಮಂದಿರ ಬದಲೂ ಮಸೀದಿ ಎಂದು ಯಾಕೆ ಬರೆದಿಲ್ಲ ಎಂದು ಪ್ರಶ್ನಿಸಿದ್ದಾರೆ.

ಈ ಸಂಬಂಧ ಆರ್‌ ಅಶೋಕ್ ಅವರು ಎಕ್ಸ್‌ ಖಾತೆಯಲ್ಲಿ ಬರೆದುಕೊಂಡು ಕಾಂಗ್ರೆಸ್‌ನ ನಡೆಯಿಂದ ಹಿಂದೂಗಳಿಗೆ ಹಿಂದೂ ಧರ್ಮಕ್ಕೆ ಅಪಮಾನ ಎಸಗಿದೆ. ಇನ್ನೂ ಕಾಂಗ್ರೆಸ್ ಪಕ್ಷಕ್ಕೆ ಹಿಂದೂ ದೇವಾಲಯಗಳೆಂದರೆ ಅದ್ಯಾಕಿಷ್ಟು ದ್ವೇಷ್ ಎಂದು ಪ್ರಶ್ನಿಸಿದ್ದಾರೆ.

ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ಗ್ರಂಥಾಲಯದ ಗೋಡೆ ಬರಹಕ್ಕೆ ಸಾಮಾಜಿಕ ಜಾಲತಣದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಹಿಂದೂಪರ ಸಂಘಟನೆಗಳು ಗೋಡೆಬರಹಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಮಂದಿರದ ಬದಲಾಗಿ ಮಸೀದಿ ಎಂದು ಯಾಕೆ ಬಳಕೆ ಮಾಡಲ್ಲ ಎಂದು ಪ್ರಶ್ನಿಸಿವೆ.


ಹಿಂದೂಗಳು ಭಿಕ್ಷುಕರಾ?

ಸರ್ಕಾರಿ ಶಾಲೆಗಳಲ್ಲಿರುವ "ಜ್ಞಾನ ದೇಗುಲಾವಿದು ಕೈ ಮುಗಿದು ಒಳಗೆ ಬನ್ನಿ" ಎನ್ನುವ ಕುವೆಂಪು ಅವರ ಸಾಲುಗಳನ್ನು ತಿರುಚಲು ಹೋಗಿ ಕನ್ನಡಿಗರ ಕೆಂಗಣ್ಣಿಗೆ ಗುರಿ ಆಗಿದ್ದ ಕಾಂಗ್ರೆಸ್ ಸರ್ಕಾರ ಈಗ ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿ ಗ್ರಾಮದ ಪಂಚಾಯಿತಿ ಗ್ರಂಥಾಲಯದಲ್ಲಿ "ಒಂದು ಮಂದಿರ ಕಟ್ಟಿಸಿದರೆ ಸಾವಿರ ಭಿಕ್ಷುಕರು ಹುಟ್ಟಿಕೊಳ್ಳುತ್ತಾರೆ" ಎಂದು ಬರೆಯಿಸುವ ಮೂಲಕ ಹಿಂದೂಗಳಿಗೆ, ಹಿಂದೂ ಧರ್ಮಕ್ಕೆ ಮತ್ತೊಮ್ಮೆ ಅಪಮಾನ ಎಸಗಿದೆ.

ಕಾಂಗ್ರೆಸ್ ಪಕ್ಷಕ್ಕೆ ಹಿಂದೂ ದೇವಾಲಯಗಳೆಂದರೆ ಅದ್ಯಾಕಿಷ್ಟು ದ್ವೇಷ?

ಹಿಂದೂಗಳ ಶ್ರದ್ಧೆ, ನಂಬಿಕೆ ಬಗ್ಗೆ ಯಾಕಿಷ್ಟು ತಾತ್ಸಾರ?

ಹಿಂದೂಗಳು ಇದಕ್ಕೆಲ್ಲಾ ಏಪ್ರಿಲ್ 26ರಂದು ಉತ್ತರ ನೀಡುತ್ತಾರೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ