ಡಿಕೆಶಿ, ಸಿದ್ದರಾಮಯ್ಯ, ಸುರ್ಜೇವಾಲ ಜಂಟಿ ನಾಯಕರ ಮಾಧ್ಯಮಗೊಷ್ಠಿ ಬೆನ್ನಲ್ಲೇ ಸಚಿವ ಮುನಿರತ್ನಗೆ ಇರಿಸು ಮುರಿಸನ್ನ ರಾಜರಾಜೇಶ್ವರಿನಗರ ಕಾಂಗ್ರೆಸ್ ಕಾರ್ಯಕರ್ತರು ತಂದಿದ್ದಾರೆ.
ರಾಜರಾಜೇಶ್ವರಿನಗರ ಕಾಂಗ್ರೆಸ್ ಕಾರ್ಯಕರ್ತರ ವಿನೂತನ ಪ್ರತಿಭಟನೆ ಮಾಡ್ತಿದ್ದು,ಬಿಜೆಪಿ ಜಾಹಿರಾತಿನ ಮೇಲೆ 40% ಬರಹಗಳು ಕಣ್ಣಿಗೆ ರಾಚುತ್ತಿದೆ.ಜಾಹಿರಾತಿನ ಮೇಲೆ 40% ಬರಹ ಕಂಡು ಬಿಬಿಎಂಪಿ ಅಧಿಕಾರಿಗಳ ಮೇಲೆ ರಾಜರಾಜೇಶ್ವರಿನಗರ ಶಾಸಕ ಮುನಿರತ್ನ ಕೆಂಡಾಮಂಡಲರಾಗಿದ್ದಾರೆ.ಸಾರ್ವಜನಿಕರ ಮುಂದೆ ಇರಿಸು-ಮುರಿಸು ತಪ್ಪಿಸಿಕೊಳ್ಳಲು ಬಿಬಿಎಂಪಿ ನೌಕರರಿಂದ ಪೂರ್ತಿ ಜಾಹಿರಾತನ್ನೇ ಬಿಜೆಪಿ ಶಾಸಕ ಮುನಿರತ್ನ ತೆಗೆಸಿದ್ದಾರೆ.