ಬೆಂಗಳೂರು : ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲನುಭವಿಸಿದ ಹಿನ್ನಲೆಯಲ್ಲಿ ರೆಬಲ್ಸ್ ಬೇಗುದಿ ಮುಂದೆ ಕಾಂಗ್ರೆಸ್ ನಾಯಕರೇ ದುರ್ಬಲರಾದ ಎಂಬ ಪ್ರಶ್ನೆ ಇದೀಗ ಉದ್ಭವವಾಗಿದೆ.
ಹೌದು. ರೆಬಲ್ ನಾಯಕರು ಪಕ್ಷದ ಬಗ್ಗೆ ಬಹಿರಂಗ ಹೇಳಿಕೆಗಳನ್ನು ನೀಡುತ್ತಿದ್ದರೂ ಕೈ ಮುಖಂಡರು ಸೈಲೆಂಟ್ ಆಗಿದ್ದಾರೆ. ಹಾಗಾಗಿ ಅತೃಪ್ತರಿಗೆ ಶೋಕಾಸ್ ನೋಟಿಸ್ ನೀಡಿದ್ರೂ ಅವರು ಡೋಂಟ್ ಕೇರ್ ಎನ್ನುತ್ತಿದ್ದಾರೆ ಎನ್ನಲಾಗಿದೆ.
ಪಕ್ಷ ವಿರೋಧ ಹೇಳಿಕೆ ಕೊಟ್ಟ ರೋಷನ್ ಬೇಗ್ ಗೆ ನೋಟಿಸ್ ಒಟ್ಟು 10 ದಿನಗಳಾದರೂ ಉತ್ತರ ಕೊಡಲ್ಲ ಎಂದು ಅವರು ಸವಾಲು ಹಾಕಿದ್ದಾರೆ. ಈ ಹೇಳಿಕೆಯ ಹಿನ್ನಲೆ ರೋಷನ್ ಬೇಗ್ ದೂರು ನೀಡಿದರೂ ಕಾಂಗ್ರೆಸ್ ಕ್ರಮ ತೆಗೆದುಕೊಳ್ಳದೆ ಮೀನಮೇಷ ಎಣಿಸುತ್ತಿದೆ ಎನ್ನಲಾಗಿದೆ.
ಅಲ್ಲದೇ, ರಾಜಣ್ಣ ವಿರುದ್ಧವೂ ವಿರೋಧಿ ಚಟುವಟಿಕೆ ಆರೋಪ ಕೇಳಿಬಂದಿದ್ದು, ಅವರ ವಿರುದ್ಧ ವೇಣು ಗೋಪಾಲ್ ಗೆ ದೂರು ನೀಡಿದ್ದರೂ ಕೂಡ, ರಾಜಣ್ಣ ವಿರುದ್ಧ ಕ್ರಮಕ್ಕೂ ಹಿಂದೇಟು ಹಾಕಿದೆ. ಹಾಗೇ ರಾಮಲಿಂಗಾರೆಡ್ಡಿಯೂ ಪಕ್ಷದ ಬಗ್ಗೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರೂ ಅವರ ಭೇಟಿಯೂ ಸಾಧ್ಯವಾಗದೆ ಕೈ ನಾಯಕರು ಸುಮ್ಮನಿದ್ದಾರೆ ಎನ್ನಲಾಗಿದೆ.