ಸುಳ್ಳು ರಾಜಕೀಯದಲ್ಲಿ ತೊಡಗಿರುವ ಕಾಂಗ್ರೆಸ್‍ಗೆ ಜನರಿಂದ ಚುನಾವಣೆಯಲ್ಲಿ ತಕ್ಕ ಪಾಠ

ಶುಕ್ರವಾರ, 28 ಏಪ್ರಿಲ್ 2023 (13:31 IST)
ಕಾಂಗ್ರೆಸ್ ನ ನಿರಂತರ ಸುಳ್ಳುಗಳು ಮತ್ತು ಇದರ ಹಿಂದಿನ ಸತ್ಯಾಂಶಗಳ ಕುರಿತ ‘ಅಸತೋಮ ಸದ್ಗಮಯ’ ಕಿರು ಹೊತ್ತಿಗೆಯನ್ನು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಬೆಂಗಳೂರಿನ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ  ಬಿಡುಗಡೆ ಮಾಡಿದರು. ನಂತರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಪ್ರತಿಯೊಂದು ಸುಳ್ಳಿನ ಹಿಂದಿರುವ ಸತ್ಯಾಂಶವನ್ನು ಜನರ ಮುಂದಿಡುವ ಉದ್ದೇಶದಿಂದ ಸಂಶೋಧನೆ ಮತ್ತು ಪರಿಣಿತಿಯೊಂದಿಗೆ ಕಿರು ಹೊತ್ತಿಗೆಯನ್ನು ರೂಪಿಸಲಾಗಿದೆ. ರಾಹುಲ್‍ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು ಸುಳ್ಳು ಹೇಳುತ್ತಲೇ ಬಂದಿದ್ದಾರೆ. ಮುಖ್ಯವಾಗಿ ಈ ಚುನಾವಣೆಯಲ್ಲಿ ಸುಳ್ಳುಗಳನ್ನು ಆಧರಿಸಿ ರಾಜಕೀಯ ಪ್ರಚಾರದಲ್ಲಿ ತೊಡಗಿದ್ದಾರೆ. ಕೆಲ ತಿಂಗಳ ಹಿಂದೆ ಎಚ್.ಎ.ಎಲ್ ಸಂಕಷ್ಟದಲ್ಲಿದೆ. ಉದ್ಯೋಗಿಗಳು ಕೆಲಸ ಕಳೆದು ಕೊಳ್ಳುವ ಭೀತಿಯಲ್ಲಿದೆ ಎಂದು ಪ್ರಚಾರ ಮಾಡಿತ್ತು. ಆದರೆ, ಎಚ್‍ಎಎಲ್ ಇದೀಗ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಗತಿ ದಾಖಲಿಸಿದೆ....ನಂದಿನಿ-ಅಮೂಲ್ ವಿಷಯದಲ್ಲಿ ರಾಜಕೀಯ ಲಾಭ ಪಡೆಯಲೆತ್ನಿಸಿತು. ಆದರೆ, ಎರಡೇ ದಿನಗಳಲ್ಲಿ ಈ ವಿಚಾರ ಠುಸ್ ಆಯಿತು. ಬ್ಯಾಂಕಿಂಗ್ ವ್ಯವಸ್ಥೆ ಶ್ರೀಮಂತರಿಗೆ ಮಾತ್ರ ಸೀಮಿತವಾಗಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಆದರೆ, ಯುಪಿಎ ಸರ್ಕಾರದಲ್ಲಿ ಬ್ಯಾಂಕ್‍ಗಳ ಸಾಲಗಳ ಬಹುತೇಕ ಮೊತ್ತ 9 ಕಂಪೆನಿಗಳಿಗೆ ಹೋಗುತ್ತಿತ್ತು. ಮೀಸಲಾತಿ ಕುರಿತು ಕಾಂಗ್ರೆಸ್ ನಾಯಕರ ಹೇಳಿಕೆಗಳ ಹಿಂದಿರುವ ನಿಜಾಂಶವನ್ನು ಬಿಜೆಪಿ ಸ್ಪಷ್ಟಪಡಿಸಿದೆ ಎಂದುಕಾಂಗ್ರೆಸ್ ಗೆ ತಿರುಗೇಟು ನೀಡಿದ್ರು

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ