ತಮ್ಮ ಮಾಹಿತಿ ಸರಿಯಲ್ಲ.ನಮ್ಮ ವರದಿಯಲ್ಲಿ ಹತ್ತು ಸೀಟ್ ಗೆಲ್ಲುತ್ತೇವೆ ಅಂತ ಬಂದಿದೆ.ಅಮೀತಾ ಶಾ ಪೂತ್ತೂರಿಗೆ ಹೋಗಬೇಕಿತ್ತು.ರೋಡ್ ಶೋ ಮಾಡಬೇಕಿತ್ತು.ಈಗ ರೋಡ್ ಶೋ ರದ್ದು ಮಾಡಿದ್ದಾರೆ.ಲಾ ಆ್ಯಂಡ್ ಆರ್ಡರ್ ಸರಿಯಿಲ್ಲ ಅಂತ ರೋಡ್ ಶೋ ರದ್ದು ಆಗಿದೆ.ಲಾ ಅ್ಯಂಡ ಪ್ರಾಬ್ಲಂ ಅಂದ್ರೆ ರಾಜ್ಯದ ಪರಿಸ್ಥಿತಿ ಹೇಗಿದೆ ಅಂತ ತೊರಿಸುತ್ತೆ.ಗೃಹ ಸಚಿವರಿಗೆ ಭದ್ರತೆ ನೀಡಲು ಆಗಲ್ಲ ಅಂದ್ರೆ ಏನು?ರಾಜ್ಯಕ್ಕೆ ಅವಮಾನ ಇದು.ನಾವು ಕರಾವಳಿಗೆ ಹಲವು ಘೋಷಣೆ ಮಾಡಿದ್ದೇವೆ.ಕರಾವಳಿ ಯಾತ್ರೆ ಮಾಡುತ್ತಿದ್ದೇವೆ.ಕಟೀಲ್ ಕಾರ್ ಎತ್ತಿ ಹೇಗೆ ಬಿಟ್ರು ಅಂತ ನೀವೇ ತೋರಿಸಿದ್ದೀರ.ಶಿವಮೊಗ್ಗ ನಿನ್ನೆ ಹೋಗಿದ್ದೆ.ಆಯನೂರು ಮಂಜುನಾಥ್ ಪೊಸ್ಟರ್ ಹಾಕಿಸಿದ್ದಾರೆ.ನೆಮ್ಮದಿ ಶಾಂತಿ ಶಿವಮೊಗ್ಗ ಬೇಕು ಅಂತ ಪೊಸ್ಟರ್ ಹಾಕಿಸಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ಮಂಜುನಾಥ್ ಸತ್ಯ ಹೇಳ್ತಾ ಇದ್ದಾರೆ.ನಾನು ಸೆಲ್ಯೂಟ್ ಮಾಡ್ತೆನೆ.ಮಲೆನಾಡು ಹಾಗೂ ಕರಾವಳಿ ಭಾಗಕ್ಕೆ ಬಂಡವಾಳ ಬರುತ್ತಿಲ್ಲ.ಗೃಹ ಸಚಿವರಿಗೆ ರಕ್ಷಣೆ ಇಲ್ಲ ಅಂದ್ರೆ ಇದಕ್ಕಿಂತ ಸಾಕ್ಷಿ ಬೇಕಾ?ಜನರು ಸಂಜೆಯಾದ್ರೆ ಕರಾವಳಿಯಲ್ಲಿ ಹೊರಗೆ ಬರುತ್ತಿಲ್ಲ.ಕರಾವಳಿ, ಮಲೆನಾಡಿನಲ್ಲಿ ದ್ವೇಷ ಬಿತ್ತುವ ಕೆಲಸ ಮಾಡಿದ್ದಾರೆ ಎಂದು ಪರೋಕ್ಷವಾಗಿ ಈಶ್ವರಪ್ಪ ಟಾರ್ಗೆಟ್ ಮಾಡಿ ಡಿ ಕೆ ಶಿವಕುಮಾರ್ ಮಾತನಾಡಿದಾರೆ.