ಲೂಟಿ ಮಾಡುವುದರಲ್ಲಿ ಕಾಂಗ್ರೆಸ್ಸಿಗರು ಚಂಬಲ್ ಕಣಿವೆ ಡಕಾಯಿತರನ್ನು ಮೀರಿಸಿದೆ: ಸಿಟಿ ರವಿ

Sampriya

ಮಂಗಳವಾರ, 8 ಏಪ್ರಿಲ್ 2025 (17:26 IST)
Photo Courtesy X
ಮಂಡ್ಯ: ದಿನದಿಂದ ದಿನಕ್ಕೆ ಹಾಲು, ವಿದ್ಯುತ್‌, ಪೆಟ್ರೋಲ್‌ ಸೇರಿದಂತೆ 50ಕ್ಕೂ ಹೆಚ್ಚಿನ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಹಗಲು ದರೋಡೆ ಮಾಡುತ್ತಿದೆ. ಇದರಿಂದ ಲೂಟಿ ಮಾಡುವಲ್ಲಿ ಚಂಬಲ್‌ ಕಣಿವೆ ದರೋಡೆಕೋರರನ್ನೂ ಕಾಂಗ್ರೆಸ್ಸಿಗರು ಮೀರಿಸಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯ ಸಿಟಿ ರವಿ ಆರೋಪಿಸಿದರು.

ನಗರದ ಸರ್‌.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿಯಿಂದ ಸಂಜಯ ಸರ್ಕಲ್‌ವರೆಗೆ ಮಂಗಳವಾರ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಜನಾಕ್ರೋಶ ಯಾತ್ರೆಯಲ್ಲಿ ಅವರು ಮಾತನಾಡಿದರು.

ಮೈಸೂರು ಮಹಾರಾಜರಿಗಿಂತ ಸಿದ್ದರಾಮಯ್ಯ ದೊಡ್ಡವರು ಅಂತ ಹೇಳುತ್ತಾರೆ. ಆದರೆ ಮಹಾರಾಜರು ತಮ್ಮ ಪತ್ನಿ ಒಡವೆಗಳನ್ನು ಒತ್ತೆ ಇಟ್ಟು ಕೆಆರ್‌ಎಸ್‌ ಅಣೆಕಟ್ಟೆ ಕಟ್ಟಿಸಿದ್ದಾರೆ. ಆದರೆ, ಸಿದ್ದರಾಮಯ್ಯನವರು ತಮ್ಮ ಪತ್ನಿ ಹೆಸರಿನಲ್ಲಿ 14 ‘ಮುಡಾ’ ನಿವೇಶನಗಳನ್ನು ಹೊಡೆದುಕೊಂಡ್ರು. ಮಹಾರಾಜ ವಂಶಸ್ಥರಿಗೆ ಇವರು ನೀಡುತ್ತಿರುವ ಕಿರುಕುಳಕ್ಕೆ ದೇವರು ಮೆಚ್ಚುತ್ತಾನಾ. ಆಸ್ತಿ ಲೂಟಿ ಮಾಡಿದವರು ಮಹಾರಾಜರ ಸಮಾನರಾಗುತ್ತಾರಾ ಎಂದು ಪ್ರಶ್ನೆ ಮಾಡಿದರು.

ತಮಿಳುನಾಡಿಗೆ ಅಗತ್ಯಕ್ಕಿಂತ ಹೆಚ್ಚು ನೀರು ಬಿಟ್ಟ ರಾಜ್ಯಕ್ಕೆ ಮಾರಿಯಾಗಿರುವ ಕಾಂಗ್ರೆಸ್ ಸರ್ಕಾರ ತಮಿಳುನಾಡಿನವರಿಗೆ ಉಪಕಾರಿಯಾಗಿದ್ದಾರೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ