ಮುರುಘಾ ಶ್ರೀ ವಿರುದ್ಧ ಷಡ್ಯಂತ್ರ ಪ್ರಕರಣ

ಮಂಗಳವಾರ, 31 ಜನವರಿ 2023 (12:03 IST)
ಬೆಂಗಳೂರು : ಮುರುಘಾ ಶ್ರೀ ವಿರುದ್ಧ ಮಾಡಿದ್ದ ಷಡ್ಯಂತ್ರ ಪ್ರಕರಣ ವಿಚಾರವಾಗಿ ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿರುವ ಹೈಕೋರ್ಟ್ ಏಕಸದಸ್ಯ ಪೀಠ ತನಿಖಾಧಿಕಾರಿಗಳ ನಡೆಯ ಬಗ್ಗೆ ತಿಳಿದುಕೊಳ್ಳುವ ಸಲುವಾಗಿ ಸರ್ಕಾರಿ ಪರ ವಕೀಲರಿಗೆ ತನಿಖಾ ವರದಿ ಸಲ್ಲಿಸುವಂತೆ ಸೂಚನೆ ನೀಡಿದೆ.

ಮುರುಘಾ ಶ್ರೀಗಳ ವಿರುದ್ಧ ಮಾಡಿದ್ದ ಷಡ್ಯಂತ್ರ ಪ್ರಕರಣದ ತನಿಖೆ ಸರಿಯಾಗಿ ನಡೆಯುತ್ತಿಲ್ಲ. ತನಿಖಾಧಿಕಾರಿಗಳಾದ ಪೊಲೀಸರು ಆರೋಪಿ ಬಸವರಾಜನ್ ಜೊತೆ ಕೈ ಜೋಡಿಸಿದ್ದಾರೆ. ಆರೋಪಿಯ ಬಳಿ ಯಾವುದೇ ಸರಿಯಾದ ಸಾಕ್ಷ್ಯವನ್ನು ಕಲೆ ಹಾಕುತ್ತಿಲ್ಲ.

ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್ ಏಕಸದಸ್ಯ ಪೀಠ ತನಿಖಾಧಿಕಾರಿಗಳ ನಡೆಯ ಬಗ್ಗೆ ತಿಳಿದುಕೊಳ್ಳುವ ಸಲುವಾಗಿ ಸರ್ಕಾರಿ ಪರ ವಕೀಲರಿಗೆ ತನಿಖಾ ವರದಿ ಸಲ್ಲಿಸುವಂತೆ ಸೂಚನೆ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ