ಬೆಂಗಳೂರಿನ ಮಾವಳ್ಳಿಪುರದಲ್ಲಿ ಬೃಹತ್‌ ಸ್ಪೊರ್ಟ್ಸ್‌ ಸಿಟಿ ನಿರ್ಮಾಣ

geetha

ಬುಧವಾರ, 14 ಫೆಬ್ರವರಿ 2024 (17:06 IST)
ಬೆಂಗಳೂರು :  ಬುಧವಾರ ಬಜೆಟ್‌ ಅಧಿವೇಶನದಲ್ಲಿ ಪಾಲ್ಗೊಂಡು ಮಾತನಾಡಿದ  ಶಾಸಕ ಎಸ್.ಆರ್‌.ವಿಶ್ವನಾಥಅವರ  ಪ್ರಶ್ನೆಗೆ ಉತ್ತರಿಸುತ್ತಾ ,  ನಿಗದಿತ ಪ್ರದೇಶದಲ್ಲಿ ಸುಸಜ್ಜಿತವಾದ ಎಲ್ಲ ಸೌಲಭ್ಯಗಳನ್ನು ಒಳಗೊಂಡ ಹಾಗೂ ಎಲ್ಲ ಕ್ರೀಡೆಗಳು ಒಂದೇ ವೇದಿಕೆಯಡಿ ಬರುವಂತ ಕ್ರೀಡಾ ಸಿಟಿ ನಿರ್ಮಾಣ ಮಾಡಲಾಗುವುದು ಎಂದು ಅವರು ಕ್ರೀಡಾ ಸಚಿವ  ಬಿ.ನಾಗೇಂದ್ರ  ಹೇಳಿದ್ದಾರೆ.
 
ಯಲಹಂಕದ  ಮಾವಳ್ಳಿಪುರ  ಬಳಿ 100 ಎಕರೆ ಪ್ರದೇಶದಲ್ಲಿ ಹೈಟೆಕ್ ‌ ಸ್ಪೋರ್ಟ್ಸ್‌ ಸಿಟಿ ನಿರ್ಮಿಸಲಾಗುವುದು ಎಂದು ಕ್ರೀಡಾ ಸಚಿವ  ಬಿ.ನಾಗೇಂದ್ರ ಹೇಳಿದ್ದಾರೆ.ಕ್ರೀಡಾ ಸಿಟಿ ನಿರ್ಮಿಸಿದರೇ ನಿಮ್ಮನ್ನು ಬೆಳ್ಳಿರಥದಲ್ಲಿ ಮೆರವಣಿಗೆ ಮಾಡಿಸುವುದಾಗಿ ಶಾಸಕ ವಿಶ್ವನಾಥ ಅವರು ಸಚಿವ ನಾಗೇಂದ್ರ ಅವರಿಗೆ ಹೇಳಿದರು ಇದಕ್ಕೆ ಪ್ರತಿಯಾಗಿ ಸಚಿವ ನಾಗೇಂದ್ರ ಅವರು ಉದ್ಘಾಟನೆ ದಿನದಂದು ನಾವು ಕಬ್ಬಡ್ಡಿ ಆಡೋಣ ಎಂದಾಗ  ಸದನ ನಗೆಗಡಲಲ್ಲಿ ತೇಲಿತು.

ಮಾವಳ್ಳಿಪುರ ಬಳಿ 60 ಎಕರೆ ಜಮೀನು ನೀಡಲು ಕಂದಾಯ ಇಲಾಖೆ ಒಪ್ಪಿಕೊಂಡಿದ್ದು;ಇದರ ಜೊತೆಗೆ ಇನ್ನೂ ಹೆಚ್ಚುವರಿಯಾಗಿ 40 ಎಕರೆ ಜಾಗ ನೀಡುವಂತೆ ಕೇಳಿಕೊಳ್ಳಲಾಗಿದೆ. ಅದನ್ನು ಪಡೆದುಕೊಂಡು ಸಂಪುಟ ಸಭೆ ಒಪ್ಪಿಗೆ ಪಡೆದುಕೊಂಡು ಸರಕಾರದಿಂದ ಅಥವಾ ಖಾಸಗಿ ಸಹಭಾಗಿತ್ವದಲ್ಲಿ ಯಾವುದಾದರೂ ಸರಿ ಈ ಕ್ರೀಡಾಸಿಟಿ ನಿರ್ಮಿಸುವುದಾಗಿ ನಾಗೇಂದ್ರ ಹೇಳಿದ್ದಾರೆ.

 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ