ಕಟ್ಟಡ ಕಾರ್ಮಿಕರ ಕಾರ್ಡ್‌ ಗಳಲ್ಲಿ ಶೇ 80 ರಷ್ಟು ಬೋಗಸ್‌

geetha

ಮಂಗಳವಾರ, 13 ಫೆಬ್ರವರಿ 2024 (18:20 IST)
ಬೆಂಗಳೂರು -ವಿಧಾನಸಭೆಯ ಜಂಟಿ ಬಜೆಟ್‌  ಅಧಿವೇಶನದ ಎರಡನೇ ದಿನವಾದ ಮಂಗಳವಾರ ಸದನದಲ್ಲಿ ಪಾಲ್ಗೊಂಡು ಮಾತನಾಡಿದ  ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಕಟ್ಟಡ ಕಾರ್ಮಿಕರ ಕಾರ್ಡ್‌ ಪಡೆದವರಲ್ಲಿ ಶೇ 80 ರಷ್ಟು ಮಂದಿ ಸುಳ್ಳು ದಾಖಲೆ ಒದಗಿಸಿ ಬೋಗಸ್‌ ಕಾರ್ಡ್‌ ಪಡೆದಿದ್ದಾರೆ ಎಂದು  ಹೇಳಿದ್ದಾರೆ.ಈ ಇಡೀ ವ್ಯವಸ್ಥೆಯನ್ನು ಸರಿಪಡಿಸಲು ಸಮಯಾವಕಾಶ ಬೇಕಿದೆ ಎಂದರು.

ಬಿಜೆಪಿ ಸದಸ್ಯರು ಎತ್ತಿದ ಆಕ್ಷೇಪಕ್ಕೆ ಉತ್ತರ ನೀಡುತ್ತಾ ಮಾತನಾಡಿದ ಸಂತೋಷ್‌ ಲಾಡ್‌, ಯಾದಗಿರಿ ಜಿಲ್ಲೆಯೊಂದರಲ್ಲೇ 30 ಲಕ್ಷ ಮಂದಿ ಕಟ್ಟಡ ಕಾರ್ಮಿಕರ ಕಾರ್ಡ್‌ ಪಡೆದಿದ್ದಾರೆ. ಪರಿಶೀಲನೆ ನಡೆಸಿದಾಗ ಅವುಗಳ ಪೈಕಿ 27 ಲಕ್ಷ ಬೋಗಸ್‌ ಕಾರ್ಡ್‌ ಗಳು ಪತ್ತೆಯಾಗಿದೆ. ಇದೇ ರೀತಿ ರಾಜ್ಯಾದ್ಯಂತ ಶೇ 80 ರಷ್ಟು ಬೋಗಸ್‌ ಕಾರ್ಡ್‌ ಗಳು ವಿತರಣೆಯಾಗಿದೆ. ಇವುಗಳನ್ನು ಕಂಡು ಹಿಡಿದು ರದ್ದುಪಡಿಸುವ ಕಾರ್ಯ ನಡೆಯುತ್ತಿದೆ ಎಂದರು.
 
ಬಿಜೆಪಿ ಶಾಸಕ ಸುನಿಲ್‌ ಕುಮಾರ್‌ ಕಾರ್ಕಳ ಮಾತನಾಡಿ, ಕಟ್ಟಡ ಕಾರ್ಮಿಕರ ಕಾರ್ಡ್‌ ಪಡೆಯಲು 90 ದಿನಗಳ ಕಾಲ ಕೆಲಸ ಮಾಡಿದ ಎಲ್ಲ ವಿವರ ನೀಡಬೇಕಿದೆ. ಇದು ಒಬ್ಬ ಅನಕ್ಷರಸ್ಥ ಕಾರ್ಮಿಕನಿಗೆ ಅಸಾಧ್ಯವಾದ ಕೆಲಸ . ಈ ಪ್ರಕ್ರಿಯೆಯನ್ನು ಸರಳಗೊಳಿಸಬೇಕು ಎಂದು ಮನವಿ ಮಾಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ